” ಡಬಲ್ ಟಿಕ್ ” ಅಂತಾ ಒಂದು 20 ನಿಮಿಷಗಳ ಕಿರುಚಿತ್ರ. ಅಂದ್ರೆ ” ಶಾರ್ಟ್ ಫಿಲ್ಮ್ ” ಅಂತೀವಲ್ಲ ಅದು. ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರದ ಹವ್ಯಕ ಮೂಲದ ಹುಡುಗರಾದಂತಹ ಕೌಂಡಿನ್ಯ ಮತ್ತು ಈಶಾನ್ಯ ಎನ್ನುವ ಸಹೋದರರು ಹವ್ಯಕ ಭಾಷೆಯಲ್ಲಿಯೇ ತೆಗೆದಿರುವ ಚಿತ್ರ. ಭಾವನೆಗಳು ಎಲ್ಲರಿಗೂ ಇರುತ್ತವೆ. ಕೆಲವು ಭಾವನೆಗಳನ್ನು ಮತ್ತೊಬ್ಬರ ಜೊತೆ ನಾವು ಹಂಚಿಕೊಳ್ಳುತ್ತೇವೆ. ಕೆಲವಷ್ಟನ್ನು ನಮ್ಮ ಮನದೊಳಗೆ ಉಳಿಸಿಕೊಂಡುಬಿಡುತ್ತೇವೆ.
ಹಾಗೆಯೇ ಮಧ್ಯ ವಯಸ್ಸಿನಲ್ಲಿ ಸಂಗಾತಿ ಕಳೆದುಕೊಂಡು, ಮನದ ಭಾವನೆಗಳನ್ನು ಹೇಳಲೂ ಆಗದೆ ಮನಸ್ಸಿನಲ್ಲೆ ತೊಳಲಾಡುವ ಹಿರಿ ಜೀವದ ಮನದಂಗಳದ ಭಾವವನ್ನು ಲಘು ಹಾಸ್ಯದ ಜೊತೆ ಕಿರುಚಿತ್ರದಲ್ಲಿ ಚಂದವಾಗಿ ಚಿತ್ರಿಸಲಾಗಿದೆ.
ಮೊಬೈಲ್ ಬಳಕೆ ಸರಿಯಾಗಿ ತಿಳಿದಿಲ್ಲದಿದ್ದರೂ, ಇಷ್ಟ ಪಟ್ಟ ಮಹಿಳೆಯೊಬ್ಬಳಿಗೆ ವಾಟ್ಸಾಪ್ ಮೂಲಕ ಮೆಸೇಜ್ ಮಾಡಿ ಪೇಚಿಗೆ ಸಿಲುಕುವ ವಿಷಯ ವಸ್ತುವನಿಟ್ಟುಕೊಂಡು ಬಹಳ ನಾಜಕಾಗಿ ಮತ್ತು ಅಷ್ಟೇ ಪ್ರಾಮುಖ್ಯತೆ ಕೊಟ್ಟು ಚಿತ್ರಿಸಿದ ಈ ಕಿರುಚಿತ್ರ ನೋಡುಗರಿಗೆ ಇಷ್ಟವಾಗುತ್ತದೆ. ಹಾಗೆಯೆ Double Tick Kannada Short Film Youtube ನಲ್ಲಿ ನೋಡಿ ಚಿತ್ರ ತಂಡವನ್ನು ಪ್ರೋತ್ಸಾಹಿಸಲು ಮರಿಬೇಡಿ.
- Lemon Grass: ನಿಂಬೆ ಹುಲ್ಲು, ಮಜ್ಜಿಗೆ ಹುಲ್ಲು ಎಂದು ಕರೆಸಿಕೊಳ್ಳುವ ಈ ಸಸ್ಯ ನಿಮ್ಮ ಕೈ ತೋಟದಲ್ಲಿ ಇರಲೇ ಬೇಕು,ಯಾಕೇ ಗೊತ್ತಾ..?
- Diesel Vehicle Ban: ಡೀಸೆಲ್ ಕಾರು ಖರೀದಿ ಮಾಡುವ ಯೋಜನೆಯಿದ್ದರೆ ಈಗಲೆ ಕೈಬಿಡಿ, 2027 ರ ವೇಳೆಗೆ ಡೀಸೆಲ್ ವಾಹನ ಸಂಪೂರ್ಣ ನಿಷೇಧದ ಪ್ರಸ್ತಾವನೆ.
- Jio Bharat Phone: ಜಿಯೋ ದ ಹೊಸ 4G ಪೀಚರ್ ಪೋನ್ ಮಾರುಕಟ್ಟೆಗೆ. ಬೆಲೆ ಕೇವಲ 999/-
- Shortest IQ Test : ನಿಮ್ಮ ಮೆದುಳಿಗೆ ಸವಾಲೊಡ್ಡುವ ವಿಶ್ವದ ಅತಿ ಚಿಕ್ಕ ಐಕ್ಯೂ ಪರೀಕ್ಷೆ, ನೀವು ಪಾಸಾಗೋಕೆ ಪ್ರಯತ್ನಿಸಿ
- Karnataka Budget 2023-24 – ಸಂಕ್ಷಿಪ್ತ ವರದಿ