ಇತ್ತೀಚೆಗಷ್ಟೇ ಚಾಕಲೇಟ್ ವಿಷಯಕ್ಕೆ ಪೋಷಕರು ಗದರಿದ್ದಿರಿಂದ ಹೆಣ್ಣು ಮಕ್ಕಳು ಮನೆ ಬಿಟ್ಟು ಬಸ್ಸು ಹತ್ತಿ ತೆರಳಿದ್ದ ವಿಷಯ ಬೆಳಕಿಗೆ ಬಂದ ಬೆನ್ನಲ್ಲೆ ಹಲವು ಇಂತಹದೆ ಪ್ರಕರಣಗಳು ವರದಿಯಾಗಿದ್ದು ಮಕ್ಕಳ ಪಾಲಕರ/ಪೋಷಕರ ಚಿಂತೆಗೀಡು ಮಾಡಿವೆ. ಹಾಗೆಯೆ ಮಕ್ಕಳ ಹಕ್ಕು ಕಾರ್ಯಕರ್ತರು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು ಪೋಷಕರ/ ಪಾಲಕರ ಅನುಮತಿ ಪತ್ರವಿಲ್ಲದೆ ಬಸ್ ಗಳಲ್ಲಿ ಸಂಚರಿಸುವದಕ್ಕೆ ಮಕ್ಕಳಿಗೆ ಅವಕಾಶ ನೀಡಬಾರದೆಂದು ಸರ್ಕಾರವನ್ನು ಒತ್ತಾಯಿಸಿದೆ.
ಮಕ್ಕಳ ಹಿತ ದೃಷ್ಟಿಯನ್ನು ಗಮನದಲ್ಲಿರಿಸಿ ಮಕ್ಕಳ ಉಚಿತ ಪ್ರಯಾಣದಲ್ಲಿ ಕೆಲವು ನಿಯಮಗಳನ್ನು ಸೇರಿಸಿಕೊಳ್ಳಿಸುವ ಅವಶ್ಯಕತೆ ಇದೆ. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ 26ನೇ ವಿಧಿಯ ಪ್ರಕಾರ ಮಕ್ಕಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಜವಾಬ್ದಾರಿ ಸರ್ಕಾರದಾಗಿರುತ್ತದೆ. ಮಕ್ಕಳ ಹಕ್ಕುಗಳ ಸಮಾವೇಶ 1992 ರಂತೆ ಮಕ್ಕಳ ಜೀವನ ರಕ್ಷಣೆ ಅಭಿವೃದ್ಧಿ ಹಾಗೂ ಭಾಗವಹಿಸುವಿಕೆಯ ಹಕ್ಕುಗಳನ್ನು ಎತ್ತಿ ಹಿಡಿಯಲು ಸರ್ಕಾರ ಬದ್ಧವಾಗಿರಬೇಕು.

ಈಗೀಗ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು ಮಕ್ಕಳು ಮನೆಯಲ್ಲಿ ಅಥವಾ ಶಾಲೆಯಲ್ಲಿ ಸ್ವಲ್ಪವೇ ತೊಂದರೆಯಾದರೂ ಬಸ್ಸು ಹತ್ತಿ ಬೇರೆ ಊರಿಗೆ ಪ್ರಯಾಣ ಬೆಳೆಸುತ್ತಿರುವ ಹಲವು ಘಟನೆಗಳು ಬೆಳಕಿಗೆ ಬಂದಿರುತ್ತವೆ ಇದು ಹಲವು ಅಪಾಯಗಳನ್ನು ತಂದೊಡ್ಡುವ ಸಾಧ್ಯತೆ ಇದ್ದು ಮಕ್ಕಳ ಉಚಿತ ಪ್ರಯಾಣದ ಮೇಲೆ ನಿಗಾ ಇರಿಸುವುದು ಅತ್ಯವಶ್ಯಕವಾಗಿದೆ. ಮಕ್ಕಳ ಈ ಉಚಿತ ಪ್ರಯಾಣವು ಸಮಾಜಘಾತುಕ ಶಕ್ತಿಗಳು ಮತ್ತು ಮಕ್ಕಳ ಕಳ್ಳ ಸಾಗಣೆಗಳ ಜಾಲಕ್ಕೆ ಬಲಿ ಆಗುವ ಸಾಧ್ಯತೆ ಇದ್ದು ಮಕ್ಕಳ ಹಿತ ದೃಷ್ಟಿಯಿಂದ ಮತ್ತು ಅಪ್ರಾಪ್ತ ಬಾಲಕಿಯರು ಒಂಟಿಯಾಗಿ ಅಥವಾ ಗುಂಪಿನಲ್ಲಿ ಬೇರೆ ಊರುಗಳಿಗೆ ಅಪರಿಚಿತರೊಂದಿಗೆ ಪ್ರಯಾಣಿಸುವಾಗ, ಪೋಷಕರ ಅನುಮತಿ ಪತ್ರವನ್ನು ಕಡ್ಡಾಯವಾಗಿ ಪಡೆಯಲೇ ಬೇಕೆಂಬ ನಿಯಮವನ್ನು ಸರ್ಕಾರ ಸಾರಿಗೆ ಇಲಾಖೆಯ ಮೂಲಕ ಸೇರಿಸಬೇಕಿದೆ.
ಅದರಂತೆ ಪೋಷಕರ ಒಪ್ಪಿಗೆ ಪತ್ರವನ್ನು ಬಸ್ ಕಂಡಕ್ಟರ್ ಪರಿಶೀಲಿಸಿದ ನಂತರವೇ ಬಸ್ಸಿನಲ್ಲಿ ಪ್ರಯಾಣ ಅನುಮತಿಸಬೇಕೆಂದು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಗಿರುತ್ತದೆ. ಅದರಂತೆ ಪೋಷಕರ ಅನುಮತಿ ಇಲ್ಲದೆ ಅಥವಾ ಪೋಷಕರ ಅನುಮತಿಯ ಪತ್ರವಿಲ್ಲದೆ ಕಂಡಕ್ಟರ್ಗಳು ಮಕ್ಕಳು ಪ್ರಯಾಣಿಸುವುದು ಕಂಡುಬಂದರೆ ಮಕ್ಕಳ ಸಹಾಯವಾಣಿ 1098 ಅಥವಾ112 ಅನ್ನು ಸಂಪರ್ಕಿಸಬಹುದು ಎಂದು ತಜ್ಞರು ಸೂಚಿಸಿರುತ್ತಾರೆ.
Also Read : ಕರ್ನಾಟಕ ಬಜೇಟ್-2023-24 ತೆರಿಗೆಯ ಹೊರೆ ಬರಿಸಲು ಜನಸಾಮಾನ್ಯರು ಸಿದ್ದರೇ.?