Gruhalakshmi Yojane FAQs- ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ಗೃಹಿಣಿಯರು ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರಗಳು

Gruhalaxmi Yojane FAQs-ಗೃಹಲಕ್ಷ್ಮಿ ಯೋಜನೆಯಡಿ ಸಾಮಾನ್ಯ ವಾಗಿ ಕೇಳುತ್ತಿರುವ ಜನರ ಪ್ರಶ್ನೆಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕರ್ನಾಟಕ ಸರಕಾರದ ಉತ್ತರಗಳು ಹೀಗಿವೆ.

Table of Contents

ಗೃಹಲಕ್ಷ್ಮಿ ಯೋಜನೆ Update 02-07-2023 :Gruhalaxmi Yojane FAQs

ಮನೆಯ ಯಜಮಾನಿಗೆ ತಿಂಗಳಿಗೆ ₹2000 ನೀಡುವ ಗೃಹ ಲಕ್ಷ್ಮಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಪ್ರಜಾ
ಪ್ರತಿನಿಧಿಗಳನ್ನು ನೇಮಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಪ್ರಜಾ ಪ್ರತಿನಿಧಿಗಳು ಆ್ಯಪ್ಗೆ ಲಾಗಿನ್ ಆಗಿ ಆನ್ಲೈ ನ್ಮೂಲಕ ಅರ್ಜಿ ಭರ್ತಿ ಮಾಡಿ, ಪೂರಕ ದಾಖಲೆಗಳನ್ನು (ರೇಷನ್ ಕಾರ್ಡ್ , ಆಧಾರ್,ಬ್ಯಾಂಕ್ ಖಾತೆ ವಿವರ) ಅಪ್ಲೋಡ್ಮಾಡಲಿದ್ದಾರೆ. ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಫಲಾನುಭವಿಗೆ ತಲುಪಿಸಲಿದ್ದಾರೆ. ಹೀ ಗೆ ತಲುಪಿಸಿದ ಪ್ರಜಾ ಪ್ರತಿನಿಧಿಗೆ ಸೇವಾ ಶುಲ್ಕವಾಗಿ ಪ್ರತಿ ಅರ್ಜಿಗೆ ಒಟ್ಟು ₹15ರಂ ತೆ (ಅರ್ಜಿ ಸಲ್ಲಿಕೆಗೆ ₹10, ಮುದ್ರಿತ ಪ್ರತಿಗೆ ₹5) ಇಲಾಖೆಯಿಂದ ನೀಡಲಾಗುತ್ತದೆ. ಅರ್ಜಿ ದಾರರು ಯಾವುದೇ ಶುಲ್ಕ ನೀಡಬೇಕಿಲ್ಲ.

‘ಗೃಹಲಕ್ಷ್ಮಿ ’ಯೋಜನೆಗೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಜುಲೈ 14ರಂ ದು ಆರಂಭವಾಗಲಿದೆ. ಆಗಸ್ಟ್ 15ರಂದು ಫಲಾನುಭವಿಗಳ ಆಧಾರ್ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ.

‘ಬೆಂಗಳೂರು ಒನ್, ಗ್ರಾಮಒನ್, ನಾಡಕಚೇರಿಗಳಲ್ಲೂ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಇರಲಿದೆ, ಸೇವಾಸಿಂಧು ಪೋರ್ಟಲ್ಮೂಲಕವೂ ಅರ್ಜಿ ಸ್ವೀಕರಿಸಲಾಗುವುದು’ ಎಂದುಮೂಲಗಳು ತಿಳಿಸಿವೆ.

Update 28-06-2023 :

ಜೂನ್ 27ರಿಂದಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಬೇಕಿತ್ತು. ಆದರೆ 28-06-2023 ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿದಂತೆ ಸರ್ವರ್ ಸಮಸ್ಯೆ ಎದುರಾಗುವ ಲಕ್ಷಣಗಳಿವೆ ಹಾಗು ಗ್ರಾಮ್ ಒನ್ ಕರ್ನಾಟಕ ಒನ್ ಕೆಂದ್ರಗಳಲ್ಲಿ ಈಗಲೆ ನೂಕು ನುಗ್ಗಲು ಇದ್ದು ಜನರಿಗೆ ಅರ್ಜಿ ಸಲ್ಲಿಸಲು ಕಷ್ಟವಾಗುವದರಿಂದ..ಗೃಹಲಕ್ಷ್ಮಿ App ಬಿಡುಗಡೆ ಮಾಡಿದ ನಂತರ ಯಾವಾಗ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ.

ಸರ್ಕಾರದ ದಿನಾ೦ಕ 20-5-2023ರ ಆದೇಶದಲ್ಲಿ, ದಿನಾ೦ಕ 20-5-2023 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನೀಡಿದ ತಾತ್ಮಿಕ ಅನುಮೋದನೆ ಮೇರೆಗೆ, ಕರ್ನಾಟಕ ರಾಜ್ಯದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000/-ಗಳನ್ನು ನೀಡುವ “ಗೃಹಲಕ್ಕ್ಮಿ ಯೋಜನೆ”ಯನ್ನು ಜಾರಿಗೆ ತರಲು ತಾತ್ಮಿಕ ಅನುಮೋದನೆ ನೀಡಿ ಆದೇಶಿಸಲಾಗಿದೆ ಹಾಗೂ ಈ ಯೋಜನೆಯ ವಿವರವಾದ ರೂಪುರೇಷೆ. ಹಾಗೂ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದೆಂದು ತಿಳಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆ ಎ೦ದರೇನು?

ಗೃಹಲಕ್ಷ್ಮಿ ಯೋಜನೆ” ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಹೊಸ ಯೋಜನೆಯಾಗಿದ್ದು, ಕುಟು೦ಬದ ಯಜಮಾನಿ ಮಹಿಳೆಗೆ ಪ್ರತಿ ತಿ೦ಗಳು Rs 2000.00 ಗಳನ್ನು ನೀಡುವ ಯೋಜನೆಯಾಗಿರುತ್ತದೆ.

ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇನು?

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸುವುದು ಮತ್ತು ಕುಟು೦ಬದ ಯಜಮಾನಿ ಆರ್ಥಿಕವಾಗಿ ಸಬಲೀಕರಣಗೊ೦ಡಲ್ಲಿ ಕುಟುಂಬದ ನಿರ್ವಹಣೆಯು ಉತ್ತಮ ಗುಣ ಟ್ಟದಲ್ಲಿರುತ್ತದೆ.

ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹತೆ ಏನು?

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅ೦ತ್ಯೋದಯ, ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿಗಳಲ್ಲಿ ಕುಟು೦ಬದ ಯಜಮಾನಿ ಎ೦ದು ನಮೂದಿಸುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ

ಈ ಯೋಜನೆಯ ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು?

ಅರ್ಜಿದಾರರು ಸೇವಾ ಸಿ೦ಧು ಪೋರ್ಟಲ್‌ ಮೂಲಕವಾಗಲಿ ಅಥವಾ ಭೌತಿಕವಾಗಲೀ (ಗ್ರಾಮ ಒನ್‌, ಬೆ೦ಗಳೂರು ಒನ್‌ ಹಾಗೂ ಕರ್ನಾಟಕ ಒನ್‌) ಗಳಲ್ಲಿ ಅರ್ಜಿ ಸಲ್ಲಿಸಬಹುದು. Website: https://sevasindhugs.karnataka.gov.in/gruhalakshmi

ಈ ಯೋಜನೆಯು ಎ೦ದಿನಿ೦ದ ಜಾರಿಗೆ ಬರುತ್ತದೆ?

ಈ ಯೋಜನೆಯು ದಿನಾ೦ಕ:27.07.2023 ರಿ೦ದ ಜಾರಿಗೆ ಬರುವ ಸಾದ್ಯತೆ ಇದೆ.

ಈ ಯೋಜನೆಗೆ ಫಲಾನುಭವಿಗಳು ಎ೦ದಿನಿ೦ದ ಅರ್ಜಿ ಸಲ್ಲಿಸಬಹುದು?

ಫಲಾನುಭವಿಗಳು ನಂತರ 27.06.2023 ರಿ೦ದ ಅರ್ಜಿ ಸಲ್ಲಿಸಬಹುದು ಎಂದು ಲಕ್ಷ್ಮಿ ಹೆಬ್ಬಾಳ್ಕರ ತಿಳಿಸಿದ್ದಾರೆ ಸರ್ವರ ಸಮಸ್ಯೆ ಕಾಡುತ್ತಿದ್ದು, ಆದಷ್ಟು ಬೇಗ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.

ಫಲಾನುಭವಿಗಳ ಆಯ್ಕೆ ಯಾವ ರೀತಿ?

27.07.2023 ರಿ೦ದ ಅರ್ಜಿ ಪರಿಶೀಲಿಸಿ, ಸ್ವಯ೦ ಘೋಷಣೆಯ ಆಧಾರದ ಮೇಲೆ
ಆಯ್ಕೆ ಮಾಡಲಾಗುವುದು.

ಈ ಯೋಜನೆಯ ಲಾಭವು ಯಾವಾಗ ಫಲಾನುಭವಿಗಳ ಖಾತೆಗೆ ಸೇರಲು ಪ್ರಾರ೦ಭವಾಗುತ್ತದೆ?

ಆಯ್ಕೆಗೊ೦ಡ ಫಲಾನುಭವಿಗಳಿಗೆ ಅಗಸ್ಟ 27 ರ ನಂತರ ಬ್ಯಾಂಕ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುವುದು.

ಈ ಯೋಜನೆಯನ್ನು ಪಡೆಯಲು ಯಾವುದೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು?

ಆಧಾರ್‌ ಕಾರ್ಡ್‌ ಪ್ರತಿ ಹಾಗೂ ಬ್ಯಾ೦ಕ್‌ ಖಾತೆ ಪಾಸ್‌ ಪುಸ್ತಕದ ಪ್ರತಿ ಸಲ್ಲಿಸುವುದು.

ಈ ಯೋಜನೆಯ ಸೌಲಭ್ಯ ಪಡೆಯಲು ಫಲಾನುಭವಿ ಪೂರ್ವ ಸಿದ್ದತೆ ಏನು ಮಾಡಿಕೊಳ್ಳಬೇಕು.

ಫಲಾನುಭವಿಯ ಬ್ಯಾಂಕ್‌ ಖಾತೆ ಮತ್ತು ಆಧಾರ ಕಾರ್ಡ್‌ ಜೋಡಣಿಯಾಗದೆ ಇದ್ದಲ್ಲಿ ಜೋಡಣೆ ಮಾಡುವುದು

ಕುಟು೦ಬದಲ್ಲಿ ಒ೦ದಕ್ಕಿ೦ತ ಹೆಚ್ಚು ಮಹಿಳೆಯರಿದ್ದಲ್ಲಿ ಈ ಯೋಜನೆಗೆ ಅರ್ಹರೇ?

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅ೦ತ್ಯೋದಯ, ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿಗಳಲ್ಲಿ ಕುಟು೦ಬದ ಯಜಮಾನಿ ಎ೦ದು ನಮೂದಿಸುವ ಕುಟುಂಬದ ಒಬ್ಬ ಮಹಿಳೆಯು ಈ ಯೋಜನೆಗೆ ಅರ್ಹರಾಗುತ್ತಾರೆ.

ಯಾರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ?

ಈ ಕೆಳಕಂಡ ಮಾನದ೦ಡಗಳನ್ನು ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.

1. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ
ಪಾವತಿದಾರರಾಗಿದ್ದಲ್ಲಿ.
2. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಜಿಎಸ್‌ಟಿ ರಿಟರ್ನ್‌
ಸಲ್ಲಿಸುವವರಾಗಿದ್ದಲ್ಲಿ.

ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕ೦ಡುಬಂದಲ್ಲಿ ಏನು ಮಾಡಲಾಗುವುದು.?

ಅರ್ಜಿದಾರರು ಸಲ್ಲಿಸುವ ಪೂರ್ಣ ಪ್ರಮಾಣದ ಅರ್ಜಿಯಲ್ಲಿನ ಸ್ವಯ೦ ಘೋಷಣೆ ಆಧಾರದ ಮೇಲೆ ಮಂಜೂರಾತಿ ನೀಡುವುದು. ಅರ್ಜಿಯಲ್ಲಿನ ಅಂಶಗಳ ಬಗ್ಗೆ ತದನ೦ತರ ಪರಿಶೀಲನೆ ಮಾಡುವುದು. ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕ೦ಡುಬಂದಲ್ಲಿ, ಈಗಾಗಲೇ ಪಾವತಿಸಲಾಗಿರುವ ಹಣವನ್ನು ಅರ್ಜಿದಾರರಿ೦ದ ವಸೂಲು ಮಾಡುವುದು ಮತ್ತು ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದು.

ಅರ್ಜಿ ಸಲ್ಲಿಸುವಾಗ ಶುಲ್ಕ ಪಾವತಿಸಬೇಕೆ?

ಅರ್ಜಿ ಸಲ್ಲಿಸುವಾಗ ಶುಲ್ಕ ಪಾವತಿಸುವ ಅಗತ್ಯ ಇಲ್ಲ.

ಅರ್ಜಿಸಲ್ಲಿಸಿದ ನ೦ತರ ಸ್ಟೀಕೃತಿ ದೊರೆಯುವುದೇ?

ಹೌದು, ಅರ್ಜಿ ಸಲ್ಲಿಸಿದ ನ೦ತರ ಸೇವಾಸಿ೦ಧು ಪೋರ್ಟಲ್‌ ಮೂಲಕ ಸ್ವೀಕೃತಿಗಳನ್ನು ಹಾಗೂ ಮ೦ಜೂರಾತಿ ಆದೇಶವನ್ನು ಪಡೆಯುವುದು.

ಯೋಜನೆಯ ಮ೦ಜೂರಾತಿ ಪ್ರಾಧಿಕಾರ?

ಗೃಹಲಕ್ಕ್ಮಿ ಯೋಜನೆಯ ಮಂಜೂರಾತಿ ಪ್ರಾಧಿಕಾರವು ಸಂಬಂಧಪಟ್ಟ ತಾಲ್ಲೂಕು/ಯೋಜನೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾರುತ್ತಾರೆ.

Leave a Comment