ಮನೆಯ ಹಿರಿಯರು ಬೆಳಿಗ್ಗೆ ಬೇಗ ಏಳ್ತಾರೆ – ಆದರೆ ಈಗಿನ ಯುವಕರಿಗೆ ಯಾಕೇ ಬೆಳಿಗ್ಗೆ ಏಳೋಕೆ ಆಗ್ತಾ ಇಲ್ಲ …ಇಲ್ಲಿದೆ ವೈಜ್ಞಾನಿಕ ಉತ್ತರ ನೋಡಿ

ಯಾರಿಗೇ ನಿದ್ದೇ ಮಾಡೋಕೆ ಇಷ್ಟವಿಲ್ಲ ಹೇಳಿ ? ಆದರೆ ಯಾಕಪ್ಪ ಈ ಮನೆಯ ಹಿರಿಯರು ಬೆಳಿಗ್ಗೆ ಮುಂಚೆ ಎದ್ದು ನಮ್ಮನ್ನು ಸಹ ಏಳಿ ಏಳಿ ಅಂತ ಸತಾಯಿಸ್ತಾರೆ ಇವರಿಗೇನು ನಿದ್ದೇನೆ ಬರೊದಿಲ್ವಾ ಅಂತ ಗೊಣಗಿಕೊಳ್ತಾ ಇದ್ದೀರಾ ಅದಕ್ಕೆ ಕಾರಣ ಹೀಗಿದೆ ನೋಡಿ

How the elders of the house get up early in the morning? Let us understand this problem in the language of science in Kannada

ರಾತ್ರಿ ಸರಿಯಾದ ಸಮಯಕ್ಕೇ ಹಿರಿಯರು ನಿದ್ದೆಗೆ ಜಾರುವುದೆ ದೊಡ್ಡ ಕಾರಣ

ಮನುಷ್ಯನಿಗೆ ವಯಸ್ಸಾದಂತೆ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಇದು ನಿದ್ರೆಯ ಮಾದರಿಗಳಲ್ಲಿನ ಬದಲಾವಣೆಗಳನ್ನು ಸಹ ಒಳಗೊಂಡಿದೆ. ಕ್ರಮೇಣ ವಯಸ್ಸು ಏರಿದಂತೆ ಮೆದುಳಿನ ಕಾರ್ಯ ಸಾಮರ್ಥ್ಯದ ಮೇಲು ಸಹ ಪರಿಣಾಮ ಬೀರುತ್ತದೆ, ಇದರಿಂದಾಗಿ ಇಂದ್ರಿಯಗಳ ಮೇಲಿನ ನಿಯಂತ್ರಣವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಯಸ್ಸಾದವರು ಹಗಲಿಡೀ ಮನೆಯ ಒಳಗೆ, ಹೊರಗಿನ ದುಡಿಮೆ ಕೆಲಸ ಕಾರ್ಯಗಳಿಂದ ಸಂಜೆಯಾಗುತ್ತಿದ್ದಂತೆ ಸುಸ್ತಿಗೆ ಜಾರುತ್ತಾರೆ ಹಾಗೂ ರಾತ್ರಿ ಬೇಗನೆ ನಿದ್ದೆಗೆ ಜಾರುತ್ತಾರೆ. ಅದರಿಂದ ಬೆಳಿಗ್ಗೆ ಬೇಗನೆ ಎದ್ದೇಳುತ್ತಾರೆ. ಇದು ವೈಜ್ಞಾನಿಕವಾಗಿ ಸರಿಯಾದ ಪದ್ದತಿಯೆಂದು ವಿಜ್ಞಾನಿಗಳು ಸಹ ಹೇಳುತ್ತಾರೆ. ಆದರೆ ಯುವಕರು ಮೊಬೈಲ್, ಟಿ.ವಿ ದೄಶ್ಯ ಮಾದ್ಯಮಗಳ ಸುಳಿಗೆ ಸಿಲುಕಿ ರಾತ್ರಿ ತಡವಾಗಿ ಮಲಗುವದರಿಂದ ಬೆಳಿಗ್ಗೆ ಏಳುವುದು ಸಹ ಕಷ್ಟವಾಗುತ್ತಿದೆ. ಇದು ನಿದ್ರಾಹೀನತೆ, ಕಿನ್ನತೆ ಹಲವು ಮಾನಸಿಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿದೆ.

ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಮುಖ್ಯ.

ಇನ್ನೊಂದು ವಿಷಯವನ್ನು ನೀವು ಗಮನಿಸಿದ್ದಿರಾ ನಮ್ಮ ಮನೆಯ ಹಿರಿಯರು ನಿಯಮಗಳ ಬಗ್ಗೆ ಕಟ್ಟುನಿಟ್ಟಾಗಿ ಇರುತ್ತಾರೆ. ಜಗತ್ತೆ ಬೇಕಾದರೆ ತಲೆ ಕೆಳಗಾಗಲಿ, ಆದರೆ ಸರಿಯಾದ ಸಮಯಕ್ಕೆ ಆಹಾರ ಬೇಕೆ ಬೇಕು. ಪ್ರತಿ ದಿನ ರಾತ್ರಿ 8 ಗಂಟೆಗೆ ಊಟ ಮಾಡಿದರೆ ದಿನವೂ ಒಂದೇ ಸಮಯಕ್ಕೆ ಊಟ ಮಾಡಬೇಕು. ರಾತ್ರಿ ಊಟವಾದ ಸ್ವಲ್ಪ ಹೊತ್ತಿನ ನಂತರ ಅವರಿಗೆ ನಿದ್ದೆ ಬರಲಾರಂಭಿಸುತ್ತದೆ.  ಆದರೆ, ಯುವಕರು ತಡರಾತ್ರಿಯಲ್ಲಿ ಊಟ ಮಾಡುತ್ತಾರೆ ಮತ್ತು ತಡವಾಗಿ ಮಲಗಲು ಬಯಸುತ್ತಾರೆ. ಈ ಕಾರಣಕ್ಕಾಗಿ, ಅವರು ಬೆಳಿಗ್ಗೆ ತಡವಾಗಿ ಎಚ್ಚರಗೊಳ್ಳುತ್ತಾರೆ.

ನಿದ್ದೆಗೆ ಜಾರುವುದಕ್ಕೆ ಹಾಗು ಬೆಳಿಗ್ಗೆ ಏಳುವದಕ್ಕೂ ಬೆಳಕು (ಲೈಟ್ ಸ್ಟಿಮ್ಯುಲೇಶನ್) ಪ್ರಮುಖ ಪಾತ್ರವಹಿಸುತ್ತದೆ

ಬೆಳಿಗ್ಗೆ ಏಳುವ ಪ್ರಕ್ರಿಯೆಯಲ್ಲಿ ಲೈಟ್ ಸ್ಟಿಮ್ಯುಲೇಶನ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಕಣ್ಣಿನ ರೆಟಿನಾ ಬೆಳಕಿಗೆ ಪ್ರತಿಕ್ರೀಸುವದನ್ನು ನೀವು ಗಮನಿಸರಬಹುದು. ರಾತ್ರಿ ನಿದ್ದೆಯಲ್ಲಿ ಮುಖಕ್ಕೆ ಟಾರ್ಚ ಬೆಳಕು ಬಿಟ್ಟರೇ ಎಚ್ಚರವಾಗುತ್ತದೆ ಅಲ್ಲವೆ? ಹಾಗೆಯೆ ರಾತ್ರಿ ಪ್ರಖರವಾದ ಬೆಳಕು ಇದ್ದರೆ ನಿದ್ದೆಗೆ ಜಾರುವುದು ಸಹ ಕಷ್ಟವೆ. ಹೀಗೆ ಬೆಳಕು ಮಬ್ಬಾದಂತೆ ಕಣ್ಣು ನಿದ್ದೆಗೆ ಪ್ರಚೋದಿಸುತ್ತದೆ. ಈ ಪ್ರಚೋದನೆಗೆ ಮುಖ್ಯ ಕಾರಣ  ಕಣ್ಣಿನಲ್ಲಿ ಉತ್ಪತ್ತಿಯಾಗುವ ಮೆಲಾಟೋನಿನ್ (Melatonin) ಹಾರ್ಮೋನ. ಇದನ್ನು ನಿದ್ದೆಯ ಹಾರ್ಮೋನ ಅಂತ ಸಹ ಕರೆಯಲಾಗುತ್ತದೆ. ಕಣ್ಣಿನ ರೆಟೀನಾ ಮೇಲೆ ಬೆಳಕು ಬೀಳುವುದು ಕಡಿಮೆ ಆದಂತೆ ಇದರ ಉತ್ಪತ್ತಿ ಹೆಚ್ಚಾಗಿ ನಿದ್ದೆಗೆ ಜಾರುತ್ತಾರೆ. ಕಣ್ಣಿನ ಪರದೆಯ ಮೇಲೆ ಬೆಳಕು ಬೀಳಲು ಆರಂಭವಾದಂತೆ ಇದರ ಸ್ರವಿಕೆ ನಿಲ್ಲುತ್ತದೆ, ವ್ಯಕ್ತಿಯು ನಿದ್ದೆಯಿಂದ ಎಚ್ಚರಗೊಳ್ಳುತ್ತಾನೆ. 

ಯುವಕರು ತಡ ರಾತ್ರಿಯವರೆಗು  ಮೊಬೈಲ್ ಸ್ಕ್ರೀನ ಬೆಳಕಿನಲ್ಲಿ ಇರುವದರಿಂದ  ಮೆಲಾಟೋನಿನ್ ಉತ್ಪತಿ ಸರಿಯಾಗಿ ಆಗದೆ ನಿದ್ರಾ ಹೀನತೆಗೆ ಒಳಗಾಗುತ್ತಾರೆ, ಹಾಗೆಯೆ ಬೆಳಿಗ್ಗೆ ತಡವಾಗಿ ಏಳುತ್ತಾರೆ, ಇದು ಕ್ರಮೇಣ ನಿದ್ರಾಹಿನತೆಯ ಸಮಸ್ಯೆಗೆ ದಾರಿ ಮಾಡಿ ಕೊಡುತ್ತದೆ ಹಗಲಲ್ಲಿ ಮಾಡುವ ನಿದ್ದೆಯು ರಾತ್ರಿ ಮಾಡುವ ನಿದ್ದೆಗೆ ಎಂದು ಸಮನಾಗುವುದಿಲ್ಲ. ಅದೇ ಕಾರಣಕ್ಕೆ ನಿದ್ದೆಗು ೩೦ ನಿಮಿಷ ಮೊದಲು  ಮೊಬೈಲ್ ಟಿ.ವಿಯಿಂದ ದೂರವಿರಬೇಕು ಅಂತ ಡಾಕ್ಟರ, ಹಾಗು ವಿಜ್ಞಾನಿಗಳು ಸಲಹೆ ನೀಡುತ್ತಾರೆ. 

ವಯಸ್ಸಾದವರು ಬೇಗ ನಿದ್ದೆಗೆ ಜಾರುವದಕ್ಕೆ ಇನ್ನೋಂದು ಕಾರಣವೆಂದರೆ ಒಬ್ಬ ವ್ಯಕ್ತಿಯ ವಯಸ್ಸು ಹೆಚ್ಚಾದಾಗ ಅವನ ದೃಷ್ಟಿಯೂ ಕಡಿಮೆಯಾಗತೊಡಗುತ್ತದೆ. ಈ ಕಾರಣದಿಂದಾಗಿ, ವಯಸ್ಸಾದವರ ಮೆದುಳು ಪಡೆದ ಬೆಳಕಿನ ಪ್ರಚೋದನೆಯು ದೃಷ್ಟಿ ಬದಲಾವಣೆಗಳನ್ನು ಕಡಿಮೆ ಮಾಡುತ್ತದೆ.  ತಜ್ಞರ ಪ್ರಕಾರ, ಮಾನವನ ಸಿರ್ಕಾಡಿಯನ್ (Circadian rhythm) ಸಂವೇದನೆಯು ಬೆಳಕಿನ ಪ್ರಚೋದನೆ ಪಡೆಯುವದರಿಂದ ಇದು ನಿದ್ದೆಯ ಚಕ್ರದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಸಿರ್ಕಾಡಿಯನ್ ರಿದಮ್ ಎಂದರೇನು?

ಸಿರ್ಕಾಡಿಯನ್ ರಿದಮ್ ಇದು ನಮ್ಮ ಮೆದುಳಿನಲ್ಲಿರುವ 24-ಗಂಟೆಗಳ ಆಂತರಿಕ ಗಡಿಯಾರವಾಗಿದ್ದು ಅದು ನಮ್ಮ ಪರಿಸರದಲ್ಲಿನ ಬೆಳಕಿನ ಬದಲಾವಣೆಗಳಿಗೆ ಪ್ರತಿಕ್ರಿಯಿಸುವ ಮೂಲಕ ಜಾಗರೂಕತೆ ಮತ್ತು ನಿದ್ರಾಹೀನತೆಯ ಚಕ್ರಗಳನ್ನು ನಿಯಂತ್ರಿಸುತ್ತದೆ. ಆದ್ದರಿಂದ ಇದು ಸೂರ್ಯಾಸ್ತದ ನಂತರ, ಹಿರಿಯರು ಆಹಾರ ಸೇವಿಸಿದ ನಂತರ ಬೇಗ ಮಲಗಲು  ಪ್ರೇರೆಪಿಸುತ್ತದೆ, ಹಾಗೆಯೆ ನಿದ್ದೆಯ ಚಕ್ರ ಸಂಪೂರ್ಣತೆಯು ಬೇಗವಾಗುವದರಿಂದ ಅವರ ನಿದ್ದೆ ಕೂಡ ಮುಂಜಾನೆಯೇ ಸಂಪೂರ್ಣವಾಗಿ ಬೇಗನೆ ಎಚ್ಚರಗೊಳ್ಳುತ್ತಾರೆ. ಆದರೆ ಯುವಕರು ತಡವಾಗಿ ನಿದ್ದೆಗೆ ಜಾರುವದರಿಂದ ಸಿರ್ಕಾಡಿಯನ್ ರಿದಮ್ ಬೆಳಕು ಹರಿದರು ಸಂಪೂರ್‍ಣವಾಗುವುದಿಲ್ಲ, ಮೆಲಿಟಾನಿನ್ ಉತ್ಫತ್ತಿಯು ಬೆಳಕಿನಲ್ಲಿ ಕ್ಷೀಣಿಸುವದರಿಂದ, ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳೆಲು ಆಗದೆ ನಿದ್ದೆಯನ್ನು ಸಹ ಮಾಡಲಾಗದೆ ಚಡಪಡಿಸುತ್ತಾರೆ.

Leave a Comment