Lemon Grass: ನಿಂಬೆ ಹುಲ್ಲು, ಮಜ್ಜಿಗೆ ಹುಲ್ಲು ಎಂದು ಕರೆಸಿಕೊಳ್ಳುವ ಈ ಸಸ್ಯ ನಿಮ್ಮ ಕೈ ತೋಟದಲ್ಲಿ ಇರಲೇ ಬೇಕು,ಯಾಕೇ ಗೊತ್ತಾ..?

Lemon Grass (Nimbe Hullu) ನಿಂಬೆ ಹಣ್ಣಿನ ಹಾಗೆ ಹುಳಿ ಇರೋದಿಲ್ಲ. ಆದ್ರೆ ಪರಿಮಳ ಮಾತ್ರ ನಿಂಬೆ ಹಣ್ಣಿನ ಪರಿಮಳದ ಹಾಗೆ ಇರುತ್ತದೆ. ಇದೇ ಕಾರಣಕ್ಕೆ ಈ ಹುಲ್ಲನ್ನು ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲು ಅಂತಾ ಕರಿಯೋದು.

ಈ ನಿಂಬೆ ಹುಲ್ಲು ತುಂಬಾ ಔಷಧಿಯ ಗುಣಗಳನ್ನು ಹೊಂದಿದೆ. ಅಜೀರ್ಣ ಸಮಸ್ಯೆ ಇದ್ದರೆ, ಶೀತ ,ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳಿಗೆ ಇದು ಉತ್ತಮ ಮನೆ ಮದ್ದು.

ಇಷ್ಟೇ ಅಲ್ಲದೇ ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆ ಆದರೆ ಅದನ್ನೂ ಸಹ ಬ್ಯಾಲೆನ್ಸ್ ಮಾಡುತ್ತದೆ. ಇದನ್ನು ಬೆಳೆಯುವುದೂ ಸಹ ಕಷ್ಟ ಏನು ಅಲ್ಲ. ಒಂದು ಸಣ್ಣ ಗಡ್ಡೆ ಅಥವಾ ಬೇರು ತಂದು ನೆಟ್ಟರೆ ಸಾಕು. ಸ್ವಲ್ಪ ಕೊಟ್ಟಿಗೆ ಗೊಬ್ಬರ ಹಾಕಿ, ನೀರು ಹಾಕಬೇಕು. ಅಷ್ಟೇ ನೆಟ್ಟ ಜಾಗದಲ್ಲೇ ಸಣ್ಣ ಪೊದೆಯಂತೆ ಬೆಳೆಯುತ್ತದೆ. ನಿಂಬೆ ಹುಲ್ಲನ್ನು ಬಳಸುವ ವಿಧಾನ ಹೇಗೆ ಎಂದರೆ, ನೀವು ಇದನ್ನು ಕಷಾಯ ಮಾಡಿ ಕುಡಿಯಬಹುದು. ಟೀ ಮಾಡುವಾಗ ಒಂದು ಸಣ್ಣ ಚೂರು ನಿಂಬೆ ಹುಲ್ಲು ಕಟ್ ಮಾಡಿ ಹಾಕಿ ಕುದಿಸಿದರೆ ಅದ್ಭುತ ಪರಿಮಳ ಮತ್ತು ರುಚಿ ಕೊಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿಯುತ್ತಿದ್ದರೆ ಅದಕ್ಕೂ ಈ ನಿಂಬೆ ಹುಲ್ಲನ್ನು ಹಾಕಿ ಕುದಿಸಿ ಕುಡಿಯಬಹುದು. ಇಷ್ಟೇ ಅಲ್ಲ ನಿಂಬೆ ಹುಲ್ಲನ್ನು ಸ್ವಲ್ಪ ಫ್ರೆಶ್ ತೆಂಗಿನ ತುರಿ ಜೊತೆ ನುಣ್ಣಗೆ ಬಿಸಿ, ಚೆನ್ನಾಗಿ ಸೊಸಬೇಕು. ಅದಕ್ಕೆ ಸ್ವಲ್ಪ ಕಡೆದ ಮಜ್ಜಿಗೆ , ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಊಟಕ್ಕೆ ತಂಬುಳಿಯಂತೆ ಬಳಸಬಹುದು. ಬೀಸುವಾಗ ಸ್ವಲ್ಪ ಜೀರಿಗೆ, ಸಣ್ಣ ಹಸಿ ಮೆಣಸು ಅಥವಾ ಗಾಂಧಾರಿ ಮೆಣಸು ಹಾಕಿ ಬೀಸಿದರೆ ಕುಡಿಯುವ ಮಜ್ಜಿಗೆಯ ಹಾಗೆ ಕುಡಿಯಲೂ ತುಂಬಾ ಚೆನ್ನಾಗಿರುತ್ತದೆ.

Lemon Grass Benefits ( Nimbe Hullu )

ಈಗ ಈ Lemon Grass ಅಥವಾ ಮಜ್ಜಿಗೆ ಹುಲ್ಲು ಅನ್ನೊ ಈ ಹುಲ್ಲಿನ ಔಷಧಿಯ ಗುಣಗಳ ಬಗ್ಗೆ ತಿಳ್ಕೋಣ ಬನ್ನಿ.

  • ಉರಿಯೂತ ನಿವಾರಕ: ನಿಂಬೇ ಹುಲ್ಲು ಸಿಟ್ರಲ್, ಜೆರಾನಿಯೋಲ್ ಮತ್ತು ಲಿಮೋನೆನ್ ನಂತಹ ಸಂಯುಕ್ತಗಳನ್ನು ಹೊಂದಿರುತ್ತದೆ. ಇದು ಸಂಧಿವಾತ, ಕೀಲು ನೋವು ಮತ್ತು ಸ್ನಾಯು ನೋವು ಮುಂತಾದ ಉರಿಯೂತ-ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ
  • ನೋವು ನಿವಾರಕ: ನಿಂಬೆ ಹುಲ್ಲಿನಿಂದ ಪಡೆದ ಸಾರಭೂತ ತೈಲವು ನೋವು ನಿವಾರಕ ಗುಣಗಳನ್ನು ಹೊಂದಿದೆ. ತಲೆನೋವು, ಮೈಗ್ರೇನ್ ಮತ್ತು ಸ್ನಾಯು ಸೇಳೆತದಂತಹ ನೋವುಗಳಿಗೆ ಇದರ ತೈಲ ಬಳಸಬಹುದು.
  • ಆಂಟಿಮೈಕ್ರೊಬಿಯಲ್: ನಿಂಬೆ ಹುಲ್ಲು ಇದು ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಯೀಸ್ಟ್‌ಗಳ ಬೆಳವಣಿಗೆಯನ್ನು ತಡೆಯಲು ಸಹಾಯಕವಾಗಿದೆ. ಇದನ್ನು ಸಾಮಾನ್ಯವಾಗಿ ಚರ್ಮದ ಸೋಂಕುಗಳ ಚಿಕಿತ್ಸೆ ಮತ್ತು ನೈಸರ್ಗಿಕ ಸೋಂಕುನಿವಾರಕವಾಗಿ ಬಳಸಲಾಗುತ್ತದೆ.
  • ಜೀರ್ಣಕಾರಿ: ನಿಂಬೆ ಹುಲ್ಲು ಇದು ಜೀರ್ಣಕ್ರಯೆಯನ್ನು ಉತ್ತಮಗೊಳಿಸುತ್ತದೆ. ಇದು ಹೊಟ್ಟೆ ಉಬ್ಬುವುದು, ಅಜೀರ್ಣ ಮತ್ತು ಹೊಟ್ಟೆನೋವಿನಂತಹ ಇದರ ಸಂಬಂಧಿತ ಸಮಸ್ಯೆಗಳಿಗೆ ಒಳ್ಳೆಯ ಔಷಧ.
  • ಆಂಟಿಆಕ್ಸಿಡೆಂಟ್‌ : ನಿಂಬೆ ಹುಲ್ಲು ಇದು ಒಂದು ಉತ್ತಮ ಆಂಟಿಆಕ್ಸಿಡೆಂಟ್‌ ಆಗಿದ್ದು, ಆಕ್ಸಿಡೇಟಿವ್ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
  • ಒತ್ತಡ ನಿವಾರಕ: ನಿಂಬೆ ಹುಲ್ಲಿನ ಪರಿಮಳವು ಮನಸ್ಸು ಮತ್ತು ದೇಹದ ಪರಿಣಾಮವನ್ನು ಬೀರುತ್ತದೆ. ಮನಸ್ಸಿನ ಒತ್ತಡ, ಆತಂಕವನ್ನು ಕಡಿಮೆ ಮಾಡಲು ಮತ್ತು ವಿಶ್ರಾಂತಿ ಪಡೆಯಲು ನಿಂಬೆ ಹುಲ್ಲನ್ನು ಚಹಾ ಅಥವಾ ಸಾರಭೂತ ತೈಲದ ರೂಪದಲ್ಲಿ ಅಂದರೆ essential oils ಆಗಿಯು ಸಹ ಬಳಸಬಹುದು.

ಆರೋಗ್ಯಕ್ಕೆ ಅನುಕೂಲವಾದ ಈ ನಿಂಬೆ ಹುಲ್ಲು ಎಲ್ಲಿ ಸಿಕ್ಕರೂ ಬಿಡದೇ ತಂದು ನಿಮ್ಮ ಮನೆಯ ತೋಟದಲ್ಲಿ ಬೆಳೆಸಿಕೊಳ್ಳಿ. ತೋಟದ ಚಂದವನ್ನೂ ಹೆಚ್ಚಿಸಿ. ಔಷಧವಾಗಿಯೂ ಬಳಸಿ.

Leave a Comment