Monsoon 2023 India: ಹವಾಮಾನ ಇಲಾಖೆಯ ರೆಡ್, ಓರೆಂಜ್, ಯಲ್ಲೊ, ಹಾಗೂ ಗ್ರೀನ್ ಅಲರ್ಟ್ ಎಂದರೇನು ?

Monsoon 2023 India: ಮಳೆಗಾಲದ ಋತುವಿನಲ್ಲಿ ಹವಾಮಾನ ಅಧಿಕಾರಿಗಳಿಂದ ಆರೆಂಜ್, ರೆಡ್, ಗ್ರೀನ್ ಮತ್ತು ಯೆಲ್ಲೋ ಅಲರ್ಟ್‌ಗಳನ್ನು ನೀವು ಕೇಳಿರಬೇಕು. ಭಾರತದಲ್ಲಿನ ಭಾರತೀಯ ಹವಾಮಾನ ಇಲಾಖೆ (IMD) ಹವಾಮಾನವನ್ನು ಅವಲಂಬಿಸಿ ಈ ಎಚ್ಚರಿಕೆಗಳನ್ನು ಕಳುಹಿಸಲು ನಾಲ್ಕು ವಿಭಿನ್ನ ಬಣ್ಣದ ಕೋಡ್‌ಗಳನ್ನು ಬಳಸುತ್ತದೆ. ಎಚ್ಚರಿಕೆಗಳನ್ನು ನೀಡಲು, ಹಲವಾರು ಹವಮಾನ ಏಜೆನ್ಸಿಗಳ ಸಹಕಾರದೊಂದಿಗೆ ಬಣ್ಣಗಳ ಆಯ್ಕೆಯನ್ನು ಮಾಡಲಾಗುತ್ತದೆ. ಹವಾಮಾನದ ತೀವ್ರತೆಯನ್ನು ಆಧರಿಸಿ ಈ ಬಣ್ಣದ ಎಚ್ಚರಿಕೆಗಳನ್ನು ಕಳುಹಿಸಲಾಗುತ್ತದೆ ಮತ್ತು ತೀವ್ರತೆ ಹೆಚ್ಚಾದಂತೆ ಬಣ್ಣಗಳು ಸಹ ಬದಲಾಗುತ್ತವೆ.

ಹವಾಮಾನ ಎಚ್ಚರಿಕೆಗಳ ವಿಧಗಳು- ಕೆಂಪು, ಕಿತ್ತಳೆ, ಹಳದಿ ಮತ್ತು ಹಸಿರು

ರೆಡ್ ಅಲರ್ಟ್(Red Alert)

ಭಾರೀ ಮಳೆಯೊಂದಿಗೆ ಗಂಟೆಗೆ 130 ಕಿಮೀ ವೇಗದಲ್ಲಿ ಗಾಳಿ ಅಥವಾ ಹೆಚ್ಚಿನ ತೀವ್ರತೆಯ ಚಂಡಮಾರುತವು ರಾಷ್ಟ್ರದ ಯಾವುದೇ ಭಾಗಕ್ಕೆ ಅಪ್ಪಳಿಸಿದಾಗ ಚಂಡಮಾರುತದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ನೀಡಲಾಗುತ್ತದೆ ಮತ್ತು ಆಡಳಿತವನ್ನು ಅಲರ್ಟ ಮಾಡಿ ತುರ್ತು ಪರಿಸ್ಥಿತಿಗೆ ತಯಾರಾಗಲು ಸೂಚಿಸುತ್ತದೆ. ಕೆಂಪು ಎಂದರೆ ಎಚ್ಚರಿಕೆ, ಸರಳವಾಗಿ ಹೇಳುವುದಾದರೆ, ಡೆಂಜರ್ (ಅಪಾಯದ) ಮುನ್ಸೂಚನೆ ನೀಡುತ್ತದೆ.

ಹವಾಮಾನದ ವರ್ತನೆ ಅಪಾಯಕಾರಿಯೆನಿಸುತ್ತಿದ್ದು ಮತ್ತು ಗಮನಾರ್ಹ ಹಾನಿಯಾಗುವ ಸಾಧ್ಯತೆಯಿರುವಾಗ ಹವಾಮಾನ ಇಲಾಖೆ ರೆಡ್ ಅಲರ್ಟ್ ನೀಡುತ್ತದೆ. 30 ಮಿಮೀ ಮಳೆಯ ಸಂಭವನೀಯತೆ ಇದ್ದು ಕನಿಷ್ಠ ಎರಡು ಗಂಟೆಗಳವರೆಗೆ ಈ ಅಲರ್ಟ ವ್ಯಾಲಿಡ್ ಇರುತ್ತದೆ. ಹಾಗೆಯೆ ಪ್ರತಿ ೨ ಗಂಟೆಗೊಮ್ಮೆ ಹವಾಮಾನದಲ್ಲಾಗುವ ಬದಲಾವಣೆಯ ಮೇಲೆ ತೀವ್ರತೆಯ ಅಧಾರದ ಮೇಲೆ ಅಲರ್ಟ್ ವಿಧವನ್ನು ನಿರ್ಧರಿಸಲಾಗುತ್ತದೆ ಹೆಚ್ಚಿನ ಸಂದರ್ಭಗಳಲ್ಲಿ, ರೆಡ್ ಅಲರ್ಟ ಇದ್ದಾಗ ನಿವಾಸಿಗಳನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲಾಗುತ್ತದೆ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯುವದನ್ನು ನಿರ್ಬಂಧಿಸಲಾಗುತ್ತದೆ. ಜೀವ ಹಾನಿಯನ್ನು ತಪ್ಪಿಸುವದಕ್ಕೆ ಬೇಕಾದ ಎಲ್ಲಾ ವ್ಯವಸ್ತೆಯನ್ನು ಕೈಗೊಳ್ಳಲಾಗುತ್ತದೆ.

ಆರೆಂಜ್ ಅಲರ್ಟ್( Orange Alert)

ಹವಾಮಾನ ಇಲಾಖೆಯು ಅಪಾಯದ ಸಂಭವನಿಯ ಸಾದ್ಯತೆ ಮುಂದೆ ಇದ್ದಾಗ ಹವಾಮಾನವು ಬಿಗಡಾಯಿಸುತ್ತಿದ್ದರೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಆರೆಂಜ್ ಎಚ್ಚರಿಕೆಗಳನ್ನು ನೀಡುತ್ತದೆ. ಹಳದಿ ಎಚ್ಚರಿಕೆಯನ್ನು ಅಪ್‌ಗ್ರೇಡ ಮಾಡುವ ಮೂಲಕ, ಆರೆಂಜ್ ಎಚ್ಚರಿಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ಹವಾಮಾನ ಇಲಾಖೆಯು ಆರೆಂಜ್ ಎಚ್ಚರಿಕೆಯನ್ನು ನೀಡಿದ್ದರೆ, ಚಂಡಮಾರುತಗಳಿಂದ ಉಂಟಾಗುವ ತೀವ್ರ ಹವಾಮಾನದ ಸಾಧ್ಯತೆಯಿದ್ದು, ಇದು ರಸ್ತೆ ಮತ್ತು ವಾಯು ಸಾರಿಗೆಗೆ ಹಾನಿಯಾಗುವುದರ ಜೊತೆಗೆ ಜೀವ ಮತ್ತು ಆಸ್ತಿ ಹಾನಿಗೆ ಕಾರಣವಾಗಬಹುದು. ಆದ್ದರಿಂದ ಪೀಡಿತ ಪ್ರದೇಶದಲ್ಲಿ ಅಪಾಯಕಾರಿ ಪ್ರವಾಹದ ಸಾಧ್ಯತೆಯಿದ್ದರೆ, ಸುರಕ್ಷಿತ ಸ್ಥಳದ ನಿವಾಸಿಗಳು ತಮ್ಮ ಮನೆಗಳಲ್ಲಿ ಉಳಿಯಲು ಹಾಗೂ ಪ್ರಭಾವಿತ ಪ್ರದೇಶದ ಜನರನ್ನು ಸ್ಥಳಾಂತರಿಸಲು ಯೋಜನೆಯನ್ನು ತಯಾರು ಮಾಡಲಾಗುತ್ತದೆ.

ಹಳದಿ ಅಲರ್ಟ್(Yellow Alert)

ಯೆಲ್ಲೋ ಅಲರ್ಟ್ ಎನ್ನುವುದು ಸಹ ಹವಾಮಾನ ಇಲಾಖೆಯು ಸಾರ್ವಜನಿಕರಿಗೆ ಮುಂಬರುವ ಹವಾಮಾನದ ಸೌಮ್ಯ ಪ್ರಮಾಣದ  ವೈಪರಿತ್ಯದ ಬಗ್ಗೆ ತಿಳಿಸಲು ಬಳಸುವ ಎಚ್ಚರಿಕೆಯ ವ್ಯವಸ್ಥೆಯಾಗಿದೆ. ಈ ಎಚ್ಚರಿಕೆಯು ಸೂಚಿಸುವದೆನೆಂದರೆ, 7.5 ರಿಂದ 15 ಮಿಮೀ ನಡುವೆ ಮಳೆಯಾಗುವ ಸಾಧ್ಯತೆಯಿದೆ, ಇದು ಮುಂದಿನ ಅಥವಾ ಎರಡು ಗಂಟೆಗಳ ಕಾಲ ಉಳಿಯಲಿದೆ ಎಂಬುದನ್ನು ಸೂಚಿಸುತ್ತದೆ

ಹಸಿರು ಅಲರ್ಟ್( Green Alert)

ಹವಾಮಾನ ಇಲಾಖೆ ಆಗಾಗ ಗ್ರೀನ್ ಸಿಗ್ನಲ್ ನೀಡುತ್ತಿದ್ದು, ಪ್ರಶ್ನಾರ್ಹ ಸ್ಥಳದಲ್ಲಿ ಯಾವುದೇ ಅಪಾಯವಿಲ್ಲ ಎಂದು ಸೂಚಿಸುತ್ತದೆ.