ಮಣ್ಣಿನ ಒಲೆ : ಆಧುನಿಕತೆಯ ಅಬ್ಬರಕ್ಕೆ ದೂರ ಸರಿಯುತ್ತಿರುವ  ಹಳೆ ನೆನಪುಗಳ ಬೆಚ್ಚನೆಯ ತಾಣ

ಕರಾವಳಿ ಮತ್ತು ಮಲೆನಾಡಿನ ಪ್ರತಿ ಮನೆಗಳನ್ನೂ ಅಲಂಕರಿಸಿದ್ದ ಇಂತಹ ಮಣ್ಣಿನ ಒಲೆಗಳು ಈಗ ಕಾಣುವುದೇ ಅತೀ ಎನ್ನುವಷ್ಟು ವಿರಳವಾಗಿದೆ. ಸಣ್ಣ ಸಣ್ಣ ಚಂದದ ಒಲೆಗಳಿಗೆ ಕೆಂಪು ಮಣ್ಣಿನ ಲೇಪನ ಮಾಡಿ ಅದರ ಮೇಲೆ ಶೇಡಿ ( ಬಿಳಿ ಮಣ್ಣು) ಇಂದ ಚಂದದ ಚಿತ್ತಾರ ಬಿಡಿಸುವ ಹೆಂಗಳೆಯರು, ಇಂತಹ ಒಲೆಯ ಮೇಲೆಯೇ ರುಚಿಯಾದ ಅಡುಗೆಗಳನ್ನು ಮಾಡಿ ಉಣಬಡಿಸುತ್ತಿದ್ದರು.

Mud stove: A warm place of old memories that are drifting away in the blaze of modernity

ಈ ಮಣ್ಣಿನ ಒಲೆಗಳು ಮಳೆಗಾಲ , ಚಳಿಗಾಲದಲ್ಲಿ ಮನೆಯ ಮುದ್ದು ಬೆಕ್ಕಿನಮರಿಗಳ ಜೊತೆಗೆ ಮಕ್ಕಳು ವೃದ್ಧರು ಎನ್ನದೆ ಮನೆ ಮಂದಿಯನ್ನೆಲ್ಲಾ ಬೆಚ್ಚಗೆ ಇಡುತ್ತಿದ್ದ ಜಾಗವಾಗಿತ್ತು. ಅಡುಗೆಮನೆಯ ಜೊತೆಗೆ ಭಾವನಾತ್ಮಕ ಬೆಸುಗೆಗೆ ಒಂದು ಮೂಲವಾಗಿದ್ದಂತಹ ಮಣ್ಣಿನ ಒಲೆಗಳು ಇಂದಿನ ಕಾಲಮಾನಕ್ಕೆ ತೀರಾ ಎನ್ನುವಷ್ಟು ಅಪರೂಪ ಆಗಿಬಿಟ್ಟಿದೆ.

Mud stove: A warm place of old memories that are drifting away in the blaze of modernity ಮಣ್ಣಿನ ಒಲೆ : ಆಧುನಿಕತೆಯ ಅಬ್ಬರಕ್ಕೆ ದೂರ ಸರಿಯುತ್ತಿರುವ  ಹಳೆ ನೆನಪುಗಳ ಬೆಚ್ಚನೆಯ ತಾಣ

ಮಣ್ಣಿನ ಒಲೆಗಳಲ್ಲೆ ಹಲವು ವಿಧಗಳನ್ನು ಕಾಣಬಹುದು. ತೊಡು ಒಲೆ, ಕೆಂಡದೊಲೆ, ಅಸ್ತ್ರ ಒಲೆ, ಹೀಗೆ ಹಲವು ಬಗೆಗಳು.  ಇಂತಹ ಒಲೆಗಳನ್ನು ಕಟ್ಟಿಕೊಳ್ಳಲು ಒಳ್ಳೆಯ ತರಬೇತಿ ಬೇಕು. ಜೊತೆಗೆ ಒಳ್ಳೆಯ ಕೌಶಲ್ಯವೂ ಬೇಕು. ಇದು ನಾಜೂಕಿನ ಕೆಲಸವಾಗಿದ್ದರಿಂದ ತಾಳ್ಮೆ, ತರಬೇತಿ, ಕೌಶಲ್ಯ ಇರುವಂತವರೆ ಕಟ್ಟಬೇಕು.

ಇಂದಿಗೂ ಸಹ ಹಳ್ಳಿ ಮನೆಗಳಲ್ಲಿ ಒಂದಾದರೂ ಇಂತಹ ಮಣ್ಣಿನ ಒಲೆ ಕಾಣಬಹುದು. ಕರೆಂಟ್ ಇಲ್ಲದಾಗ, ಗ್ಯಾಸ್ ಖಾಲಿ ಆದಾಗ ಮಣ್ಣಿನ ಒಲೆಗಳೆ ಉಪಯೋಗಕ್ಕೆ ಬರುತ್ತವೆ. ಅಭಿವೃದ್ಧಿ, ಆಧುನಿಕತೆಯ ಹೊಡೆತಕ್ಕೆ ವಿರಳ ಎನಿಸಿರುವ ಮಣ್ಣಿನ ಒಲೆಗಳು ಮುಂದಿನ ತಲೆಮಾರುಗಳಿಗೆ ಹಳೆಯ ಕಾಲದ ಪಳೆಯುಳಿಕೆ ಆದರೂ ಅಚ್ಚರಿಯೇನಿಲ್ಲ.

Leave a Comment