ಬಜಾಜ್ ಕಂಪನಿಯ ಪ್ರಸಿದ್ಧ ಬೈಕ್ ಬಜಾಜ್ ಪ್ಲಾಟಿನಾ ತನ್ನ ಮೈಲೇಜ್‌ನಿಂದ ಹೆಸರುವಾಸಿಯಾಗಿತ್ತು. ಈ ಬೈಕ್ ಮೈಲೇಜ್ ವಿಚಾರದಲ್ಲಿ ಎಲ್ಲ ಬೈಕ್ ಅನ್ನು ಹಿಂದಿಕ್ಕುವ ಸಾಮರ್ಥ್ಯ ಹೊಂದಿರುವದರಿಂದ ಈ ಬೈಕ್ ಬಹಳಷ್ಟು ಭಾರತೀಯರಿಗೆ ತುಂಬಾ ಇಷ್ಟವಾಗಿದ್ದು, ‘ಫಾದರ್ ಆಫ್ ಮೈಲೇಜ್ (Father of Mileage)’ ಎಂಬ ಬಿರುದು ಪಡೆದಿದೆ.
ಹೊಸ ಬಜಾಜ್ ಪ್ಲಾಟಿನಾ (New Bajaj Platina)
ಇತ್ತೀಚೆಗೆ, Bajaj ಕಂಪನಿಯು ಬಜಾಜ್ ಪ್ಲಾಟಿನಾದ ಹೊಸ ಮಾದರಿಯನ್ನು ಬಿಡುಗಡೆ ಮಾಡಿದೆ, ಅದರ ಬಗ್ಗೆ ಸಂಪೂರ್ಣ ವಿವರವಾದ ಮಾಹಿತಿ ಹೀಗಿದೆ. ಅಪರೂಪಕ್ಕೆ ಇಷ್ಟೊಂದು ಫೀಚರ್ ಗಳನ್ನು ಹೊಂದಿರುವ ಬೈಕ್ ಇಷ್ಟು ಅಗ್ಗದ ಬೆಲೆಗೆ ಬಿಡುಗಡೆಯಾಗಿದೆ. ಈಗ ಹೊಸದಾಗಿ ಬಿಡುಗಡೆಯಾದ ಬಜಾಜ್ ಪ್ಲಾಟಿನಾ ಬಗ್ಗೆ ನಾವು ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ.
ಹೊಸ ಬಜಾಜ್ ಪ್ಲಾಟಿನಾ ಎಂಜಿನ್ (New Bajaj Platina Engine)
ಬಜಾಜ್ ಕಂಪನಿ ಮೊದಲು ಪರಿಚಯಿಸಿರುವ ಶ್ರೇಷ್ಠ ಬೈಕ್‌ನ ಮಾಧರಿಯಲ್ಲಿ ನೀಡಲಾದ ಅದೇ ಎಂಜಿನ್ ಅನ್ನು ಹೊಸ ಮಾಧರಿಯಲ್ಲು ಬಳಸಲಾಗುತ್ತಿದ್ದು ವ್ಯತ್ಯಾಸವೆಂದರೆ ಮುಂಬರುವ ಬೈಕ್‌ನ ಎಂಜಿನ್ ಅನ್ನು BS6 Stage 2 ರೊಂದಿಗೆ ಪರಿಚಯಿಸಲಾಗುತ್ತಿದೆ. ಇದು ಸ್ವಲ್ಪವೆ ಇಂದನದಲ್ಲಿ ಹೆಚ್ಚು ಕಿಲೋಮೀಟರ್ ಓಡುತ್ತದೆ ಮತ್ತು ಕನಿಷ್ಠ ಮಾಲಿನ್ಯವನ್ನು ಉಂಟುಮಾಡುತ್ತದೆ.
ಈ ಬೈಕ್‌ನಲ್ಲಿ 102 ಸಿಸಿ ಸಿಂಗಲ್ ಸಿಲಿಂಡರ್ ಮತ್ತು ಆಯಿಲ್ ಕೂಲ್ಡ್ ಎಂಜಿನ್ ನೀಡಲಾಗಿದೆ. ಇದು 7 bhp ವರೆಗೆ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಉತ್ತಮ ಎಂಜಿನ್‌ನ ಒಂದು ವಿಶೇಷವೆಂದರೆ ಈ ಎಂಜಿನ್‌ನಿಂದಾಗಿ ಈ ಬೈಕ್ 1 ಲೀಟರ್ ಪೆಟ್ರೋಲ್‌ನಲ್ಲಿ 95 ಕಿಲೋಮೀಟರ್‌ಗಳವರೆಗೆ ಓಡುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಬಜಾಜ್ ಪ್ಲಾಟಿನಾ ವೈಶಿಷ್ಟ್ಯಗಳೇನು(New Bajaj Platina Features)
ಈ ಹೊಸ ಬಜಾಜ್ ಪ್ಲಾಟಿನಾವು ಹಿಂದಿನ ಮಾಧರಿಯಲ್ಲಿ ಲಭ್ಯವಿಲ್ಲದ ಕೆಲವು ಹೊಸ ವೈಶಿಷ್ಟ್ಯಗಳನ್ನು ನೀಡಲಿದೆ. ಈ ಬೈಕ್‌ನಲ್ಲಿ ABS (Anti Braking System), ಶೇಕಡಾ 20 ರಷ್ಟು ಉದ್ದದ ಮುಂಭಾಗ ಮತ್ತು ಹಿಂಭಾಗದ ಸಸ್ಪೆನ್ಷನ್ ನೈಟ್ರಾಕ್ಸ್‌ನೊಂದಿಗೆ (NITROX Suspension) ಬರಲಿದೆ. ಹಾಗೆಯೆ ಅನಲಾಗ್ ಸ್ಪೀಡೋಮೀಟರ್, ಇಂಟಿಗ್ರೇಟೆಡ್ ಡಿಆರ್‌ಎಲ್‌ನೊಂದಿಗೆ ಎಲ್‌ಇಡಿ ಹೆಡ್‌ಲ್ಯಾಂಪ್, ಉತ್ತಮ ವೈಶಿಷ್ಟ್ಯಗಳಂತಹ ಉದ್ದವಾದ ಕ್ವಿಲ್ಟೆಡ್ ಸೀಟುಗಳು ಸಹ ಹೊಂದಿವೆ
- WhatsApp New HD Feature: ಉತ್ತಮ ಗುಣಮಟ್ಟದ ವೀಡಿಯೊ ಹಾಗೂ ಪೋಟೋಗಳನ್ನು ಮುಂದೆ ಸುಲಭವಾಗಿ ಹಂಚಿಕೊಳ್ಳಬಹುದು
- Uniform Civil Code(UCC)-ಏಕರೂಪ ನಾಗರಿಕ ಸಂಹಿತೆಯೆಂದರೇನು, ಪ್ರಯೋಜನೆಗಳೇನು ಭಾರತದ ಪ್ರತಿಯೊಬ್ಬ ನಾಗರಿಕನು ತಿಳಿದಿರಲೇ ಬೇಕಾದ ಮಾಹಿತಿ
- ನೀವು ನಿಮ್ಮ ಆದಾಯವನ್ನು ಏಕೆ ಬಹಿರಂಗಪಡಿಸಬಾರದು: ದುಡಿಯುವ ಪ್ರತಿಯೊಬ್ಬರು ತಿಳಿದಿರಲೇ ಬೇಕಾದ ಮಾಹಿತಿ.
ಹೊಸ ಬಜಾಜ್ ಪ್ಲಾಟಿನಾದ ಬೆಲೆ ಏನು
ಈ ಮಹಾನ್ ಬೈಕ್‌ನ ಬೆಲೆಯನ್ನು ಉಳಿದ ಎಲ್ಲಾ ಕಂಪನಿಯ ಬೈಕ್ ಗಳಿಗಿಂತ ಅತಿ ಕಡಿಮೆ ಇರಿಸಿ ಆಶ್ಚರ್ಯಕ್ಕೆ ಕಾರಣವಾಗಿದೆ. ಬಜಾಜ್ ಕಂಪನಿಯ ಹೊಸ ಬಜಾಜ್ ಪ್ಲಾಟಿನಾ 100 ನ ಆರಂಭಿಕ ಬೆಲೆಯನ್ನು ಕೇವಲ ₹ 62,638 ಇದ್ದು , ಬೈಕ್‌ನ ಉನ್ನತ ಮಾದರಿಯನ್ನು ಖರೀದಿಸಲು ಬಯಸಿದರೆ, ನೀವು ₹ 79,283 ಖರ್ಚು ಮಾಡಬೇಕಾಗಬಹುದು. ಈ ಬೈಕ್ ನಾಲ್ಕು ರೂಪಾಂತರಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದೆ. ರೂಪಾಂತರವನ್ನು ಅವಲಂಬಿಸಿ, ಅದರ ಬೆಲೆಯನ್ನು ನಿರ್ಧರಿಸಲಾಗಿದೆ.
- Lexus India 5th Gen ಐಷಾರಾಮಿ ಕಾರಿನ ವಿತರಣೆ ಆರಂಭವಾಗಿದೆ. ಬೆಲೆ ಮತ್ತು ಪೀಚರ್ಸ್ ಕೇಳಿದ್ರೆ ದಂಗಾಗ್ತಿರಾ
- ದೇಶವನ್ನೇ ಬೆರಗುಗೊಳಿಸಿದ ಮದ್ಯಪ್ರದೇಶದ ಸೆಷನ್ಸ ನ್ಯಾಲಾಯದ ತೀರ್ಪು – ವಂಚಕನಿಗೆ ಬರೋಬ್ಬರಿ 170 ವರ್ಷಗಳ ಜೈಲು ಶಿಕ್ಷೆ.
- 10 ಅತ್ಯಗತ್ಯ ಹಣಕಾಸು ಸಲಹೆಗಳು -ನಿಮ್ಮ ಹಣವನ್ನು ನೀವು ಹೇಗೆ ನಿರ್ವಹಿಸಬಹುದು ಹಾಗೂ ಆರ್ಥಿಕವಾಗಿ ಸಭಲರಾಗಬಹುದು-10 Essential Personal Finance Tips in Kannda