ಭಾರತದಲ್ಲಿ ಸ್ಯಾಮಸಂಗ್ ಗ್ಯಾಲಾಕ್ಸೀ S24 ಅಲ್ಟ್ರಾ Samsung Galaxy S24 Ultra Release Date: 

ದಕ್ಷಿಣ ಕೊರಿಯಾದ ಮೊಬೈಲ್ ಕಂಪನಿ ಸ್ಯಾಮಸಂಗ್ ತನ್ನ ಹೊಸ ಗ್ಯಾಲಾಕ್ಸೀ ಸರಣಿಯ(Samsung Galaxy S24) ಸ್ಯಾಮಸಂಗ್ ಗ್ಯಾಲಾಕ್ಸೀ S24 ಅಲ್ಟ್ರಾ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಫೋನ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದೆ ಸ್ಯಾಮ್‌ಸಂಗ್ ಈ ಬಾರಿ Apple iPhone Mobile  ಗೆ  ಕಠಿಣ ಸ್ಪರ್ಧೆಯನ್ನು ನೀಡುವ ನಿರೀಕ್ಷೇಯಿದೆ. 

ಸ್ಯಾಮ್‌ಸಂಗ್‌ನ ಈ ಹೊಸ ಸ್ಮಾರ್ಟ್‌ಫೋನ್‌ Samsung Galaxy S24 ಬಲವಾದ AI ವಿಶೇಷತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ . Samsung ಕಂಪನಿಯು ತನ್ನ Galaxy ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು Samsung Galaxy S24 , Samsung Galaxy S24 Plus  ಮತ್ತು  Samsung Galaxy S24 Ultra ಒಟ್ಟು 3 ರೂಪಾಂತರಗಳಲ್ಲಿ  ಬಿಡುಗಡೆ ಮಾಡಲಿದ್ದು ಇದರ ಕುರಿತು ಸಂಪೂರ್ಣ ವಿವರ ಹೀಗಿದೆ.

Samsung Galaxy S24 Ultra Display

Samsung Galaxy S24 ಸರಣಿಯ ಈ ಹೊಸ ಸ್ಮಾರ್ಟ್‌ಫೋನ್‌ ಪಂಚ್-ಹೋಲ್ ಡಿಸ್ಪ್ಲೇ ಮತ್ತು ಬೆಜೆಲ್-ಲೆಸ್ ಡಿಸೈನ್ ಜೊತೆಗೆ ಅತ್ಯುತ್ತಮ ಗುಣಮಟ್ಟದ ಅಲ್ಟ್ರಾ ಡಿಸ್ಪ್ಲೇ ಹೊಂದಿದೆ. ಈ ಫೋನ್ 6.8 ಇಂಚಿನ ಡೈನಾಮಿಕ್ AMOLED ಡಿಸ್ಪ್ಲೇ  ಹೊಂದಿದ್ದು,  1440×3200 ರೆಸಲ್ಯೂಶನ್  ಮತ್ತು ಪರದೆಯ ಸಾಂದ್ರತೆ 516 PPI ಇದ್ದಿರುತ್ತದೆ.  ಇದಲ್ಲದೇ 120 Hz ನ ಸ್ಕ್ರೀನ್ ರಿಫ್ರೆಶ್ ದರವನ್ನು ಸಹ ಹೊಂದಿದ್ದು ಪೊನ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಬೇಕಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ

Samsung Galaxy S24 ಅಲ್ಟ್ರಾ ಕ್ಯಾಮೆರಾ

Samsung Galaxy S24 ನಲ್ಲಿ ಕ್ಯಾಮೆರಾ ಕೂಡ ಅತ್ಯುತ್ತಮವಾಗಿದೆ. 4 ಕ್ಯಾಮೆರಾ ಸೆಟಪ್ ಈ ಫೋನ್‌ನಲ್ಲಿದ್ದು ಪ್ರಾಥಮಿಕ ಕ್ಯಾಮೆರಾ 200 MP, ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ 12 MP, ಟೆಲಿಫೋಟೋ ಕ್ಯಾಮರಾ 10 MP ಜೊತೆಗೆ 3x ಜೂಮ್ ಸಹ ಒಳಗೊಂಡಿದೆ. ಇದಲ್ಲದೆ, 50 MP 5x ಜೂಮ್ ಕ್ಯಾಮೆರಾವನ್ನು ಸಹ ಕಾಣಬಹುದು. ಮತ್ತು ಎಲ್ಇಡಿ ಫ್ಲ್ಯಾಷ್ಲೈಟ್ ಅನ್ನು ಸಹ ಒಳಗೊಂಡಿದೆ.  ವೀಡಿಯೊ ರೆಕಾರ್ಡ್ ಮಾಡಲು 8k@24fps ವಿಶೇಷತೆ ಸಹ ಲಭ್ಯವಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿಯೇ 12 MP ಕ್ಯಾಮೆರಾ ನೀಡಲಾಗಿದೆ.  ಸೆಲ್ಫಿ ಕ್ಯಾಮೆರಾದ ಸಹಾಯದಿಂದ, ನೀವು 4k @30 fps ನಲ್ಲಿ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು.

Samsung Galaxy S24 ಅಲ್ಟ್ರಾ ಪ್ರೊಸೆಸರ್

Samsung Galaxy S24 ನಲ್ಲಿ ಅತ್ಯಂತ ಶಕ್ತಿಶಾಲಿ ಪ್ರೊಸೆಸರ್ Qualcomm Snapdragon 8 Gen 3 ಅನ್ನು ಬಳಸಲಾಗಿದೆ. ಇದು Qualcomm ನ ಅತ್ಯಂತ ಪ್ರಸಿದ್ಧ ಮತ್ತು ಶಕ್ತಿಯುತ ಪ್ರೊಸೆಸರ್ ಎಂದು ಪರಿಗಣಿಸಲಾಗಿದೆ.

Samsung Galaxy S24 ಅಲ್ಟ್ರಾ ಬ್ಯಾಟರಿ ಮತ್ತು ಚಾರ್ಜರ್

Samsung Galaxy ಸರಣಿಯ ಹೊಸ ಸ್ಮಾರ್ಟ್‌ಫೋನ್ 5000 mAh ನ ದೊಡ್ಡ ಬ್ಯಾಟರಿಯನ್ನು ಹೊಂದಿದೆ. 45W ವೇಗದ ಚಾರ್ಜಿಂಗ್ ಬೆಂಬಲವನ್ನು USB ಟೈಪ್-C ಯೊಂದಿಗೆ ಒದಗಿಸಲಾಗಿದ್ದು್,  ಈ Samsung ಫೋನ್ 0% ರಿಂದ 100% ವರೆಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 30 ರಿಂದ 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ನೀವು ಈ ಫೋನ್ ಅನ್ನು 12 ಗಂಟೆಗಳ ಕಾಲ ಬಳಸಬಹುದು.

ಭಾರತದಲ್ಲಿ Samsung Galaxy S24 ಅಲ್ಟ್ರಾ ಬಿಡುಗಡೆ ದಿನಾಂಕ

ಕಂಪನಿಯು ತನ್ನ ಹೊಸ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್‌ಫೋನ್ ಅನ್ನು ಯಾವಾಗ ಬಿಡುಗಡೆ ಮಾಡುತ್ತದೆ? ಇದನ್ನು Samsung ಮೊಬೈಲ್ ತಯಾರಕರು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಪ್ರಸಿದ್ಧ ತಂತ್ರಜ್ಞಾನ ವೆಬ್‌ಸೈಟ್‌ಗಳ ಪ್ರಕಾರ ಮುಂಬರುವ ಜನವರಿ 17 2024 ರಂದು ಸ್ಯಾಮ್‌ಸಂಗ್ ಈ ಹೊಸ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಬಹುದೆಂದು ಅಂದಾಜಿಸಲಾಗಿದೆ.

ಭಾರತದಲ್ಲಿ Samsung Galaxy S24 Ultra ಬೆಲೆ

Samsung Galaxy ಸರಣಿಯ ಮುಂಬರುವ ಹೊಸ ಸ್ಮಾರ್ಟ್‌ಫೋನ್‌ಗಳ ಬೆಲೆಗಳ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಿಲ್ಲ.  ಸ್ಯಾಮ್‌ಸಂಗ್ ತನ್ನ ಹೊಸ ಫೋನ್ ಅನ್ನು ಸುಮಾರು 92,999 ರೂಪಾಯಿಗಳಿಗೆ ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆಯೆಂದು ತಂತ್ರಜ್ಞಾನ ತಜ್ಞರು ಹೇಳುತ್ತಿದ್ದಾರೆ.

Samsung Galaxy S24 ಅಲ್ಟ್ರಾದ ವಿಶೇಷತೆಗಳು

ವೈಶಿಷ್ಟ್ಯಗಳುವಿಶೇಷಣಗಳು
ಮಾದರಿ ಹೆಸರುSamsung Galaxy S24 Ultra
ರಾಮ್12 ಜಿಬಿ
ಆಂತರಿಕ ಶೇಖರಣೆ256 ಜಿಬಿ
GPU/CPU ಪ್ರೊಸೆಸರ್Qualcomm Snapdragon 8 Gen 3, ಆಕ್ಟಾ ಕೋರ್ (3.3 GHz, ಸಿಂಗಲ್ ಕೋರ್ + 3.2 GHz, ಪೆಂಟಾ ಕೋರ್ + 2.3 GHz, ಡ್ಯುಯಲ್ ಕೋರ್)
ಪ್ರದರ್ಶನ ಪರದೆಯ6.8 ಇಂಚುಗಳು, ಡೈನಾಮಿಕ್ AMOLED ಡಿಸ್ಪ್ಲೇ, 1440×3200 Px, (516 PPI) ಸ್ಕ್ರೀನ್ ಡೆನ್ಸಿಟಿ, & 120 Hz ರಿಫ್ರೆಶ್ ರೇಟ್, ಪಂಚ್-ಹೋಲ್ ಡಿಸ್ಪ್ಲೇ ಜೊತೆಗೆ ಬೆಜೆಲ್-ಲೆಸ್
ಹಿಂದಿನ ಕ್ಯಾಮೆರಾ200 MP ಪ್ರಾಥಮಿಕ ಕ್ಯಾಮೆರಾ, 12 MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ, 10 MP ಟೆಲಿಫೋಟೋ 3x ಜೂಮ್, 50 MP ಕ್ಯಾಮೆರಾ 5x ಜೂಮ್ 8K @24fps ವೀಡಿಯೊ ರೆಕಾರ್ಡಿಂಗ್ ಲಭ್ಯವಿದೆ
ಮುಂಭಾಗದ ಕ್ಯಾಮರಾ12 MP ಸೆಲ್ಫಿ ಕ್ಯಾಮೆರಾ, 4K @30 fps ವೀಡಿಯೊ ರೆಕಾರ್ಡಿಂಗ್ ಲಭ್ಯವಿದೆ
ಬ್ಯಾಟರಿಎಲ್ಇಡಿಗಳು
ಬ್ಯಾಟರಿ5000 mAh
ಚಾರ್ಜರ್45W ಫಾಸ್ಟ್ ಚಾರ್ಜಿಂಗ್ ಮತ್ತು USB ಟೈಪ್-C ಕೇಬಲ್ ಪೋರ್ಟ್
ಸಿಮ್ ಕಾರ್ಡ್ದ್ವಂದ್ವ
ಬೆಂಬಲಿತ ನೆಟ್‌ವರ್ಕ್ಭಾರತದಲ್ಲಿ 5G ಬೆಂಬಲಿತವಾಗಿದೆ + 4G VoLTE, 3G, 2G
ಫಿಂಗರ್‌ಪ್ರಿಂಟ್ ಲಾಕ್ಲಭ್ಯವಿದೆ
ಫೇಸ್ ಲಾಕ್ಲಭ್ಯವಿದೆ
ಬಣ್ಣದ ಆಯ್ಕೆಗಳುಟೈಟಾನಿಯಂ ಹಳದಿ, ಟೈಟಾನಿಯಂ ಬೂದು, ಟೈಟಾನಿಯಂ ಕಪ್ಪು ಮತ್ತು ಟೈಟಾನಿಯಂ ನೇರಳೆ
ಸ್ಯಾಮಸಂಗ್ ಗ್ಯಾಲಾಕ್ಸೀ S24 ಅಲ್ಟ್ರಾ ವಿಶೇಷತೆಗಳು

Samsung Galaxy S24 ಅಲ್ಟ್ರಾ ಪ್ರತಿಸ್ಪರ್ಧಿಗಳು

ಸ್ಯಾಮ್‌ಸಂಗ್‌ನ ಮುಂಬರುವ ಗ್ಯಾಲಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ತಕ್ಷಣ ಭಾರತೀಯ ಮಾರುಕಟ್ಟೆಯಲ್ಲಿ iPhone 15 Pro Max ನೊಂದಿಗೆ ಸ್ಪರ್ಧಿಸಲಿವೆ ಎನ್ನುವ ಸುದ್ದಿ ಕುತೂಹಲಕಾರಿಯಾಗಿದೆ.

Also Read

WhatsApp New HD Feature:  ಉತ್ತಮ ಗುಣಮಟ್ಟದ ವೀಡಿಯೊ ಹಾಗೂ ಪೋಟೋ

Leave a Comment