Uniform Civil Code(UCC)-ಏಕರೂಪ ನಾಗರಿಕ ಸಂಹಿತೆಯೆಂದರೇನು, ಪ್ರಯೋಜನೆಗಳೇನು ಭಾರತದ ಪ್ರತಿಯೊಬ್ಬ ನಾಗರಿಕನು ತಿಳಿದಿರಲೇ ಬೇಕಾದ ಮಾಹಿತಿ

Uniform Civil Code and its Benefits in Kannada

ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತಿದ್ದು, ಪ್ರಸ್ತಾವಿತ ಕಾನೂನಿನ ಬದಲಾವಣೆಗಳು ದೇಶದಲ್ಲಿ ಸಂಕೀರ್ಣವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸವಾಲುಗಳನ್ನು ಹೇಗೆ ನಿಭಾಯಿಸಬಹುದು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಭಾರತವು ವಿವಿಧ ಧಾರ್ಮಿಕ ಪಂಥಗಳ ಸಂಪ್ರದಾಯಗಳ ಮತ್ತು ಪದ್ಧತಿಗಳ ವೈವಿಧ್ಯಮಯ ರಾಷ್ಟ್ರವಾಗಿದೆ ಮತ್ತು ಒಂದೊಂದು ಪಂಥವು ಕೆಲವು ವೈಯಕ್ತಿಕ ಕಾನೂನುಗಳನ್ನು ಹೊಂದಿದ್ದು ಏಕರೂಪ ನಾಗರಿಕ ಸಂಹಿತೆಯನ್ನು ಇವೆಲ್ಲ ದೃಷ್ಟಿಕೋನಗಳಿಗೆ ಸಂವೇದನಾಶೀಲವಾಗಿರುವಂತೆ ರೂಪಿಸುವುದು ಮೋದಿ ಸರ್ಕಾರಕ್ಕೆ ಒಂದು ಸವಾಲಾಗಿದೆ.

ಯುನಿವರ್ಸಲ್ ಸಿವಿಲ್ ಕೋಡ್” (UCC) ಸಮಾನ ನಾಗರಿಕ ಸಂಹಿತೆ ಎಂದರೇನು.?

ಯುನಿವರ್ಸಲ್ ಸಿವಿಲ್ ಕೋಡ್” (UCC) ಸಮಾನ ನಾಗರಿಕ ಸಂಹಿತೆ  ಎನ್ನುವುದು ಭಾರತದ  ಕೆಂದ್ರ ಸರ್ಕಾರ ಆಚರಣೆಗೆ ತರಲು ಬಯಸುತ್ತಿರುವ ಒಂದು ಕಾನೂನಾಗಿದ್ದು  ಸಾಮಾನ್ಯವಾಗಿ ಧಾರ್ಮಿಕ ಅಥವಾ ಸಾಂಪ್ರದಾಯಿಕ ಆಚರಣೆಗಳ ಆಧಾರದ  ನಿಂತಿರುವ ಎಲ್ಲಾ ಧರ್ಮ ಪಂಥದ ಜನರನ್ನು  ಧರ್ಮ, ಲಿಂಗವನ್ನು ಲೆಕ್ಕಿಸದೆ ದೇಶದ ಎಲ್ಲಾ ನಾಗರಿಕರಿಗೆ ಅನ್ವಯಿಸುವ  ಒಂದೇ ನಾಗರಿಕ ಕಾನೂನುಗಳ ಮೂಲಕ ಸಮಾನತೆಯನ್ನು ಸ್ಥಾಪಿಸುವುದು ಇದರ ಗುರಿಯಾಗಿದೆ.

ಕೆಲವು ವಿಷಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯ ಕೆಲವು ಅಂಶಗಳನ್ನು ಈಗಾಗಲೇ ಅಳವಡಿಸಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಉದಾಹರಣೆಗೆ, ಭಾರತ ಸರ್ಕಾರವು ವಿವಾಹ ನೋಂದಣಿ, ವಿಚ್ಛೇದನ ಪ್ರಕ್ರಿಯೆಗಳು ಮತ್ತು ತ್ರಿವಳಿ ತಲಾಖ್ (ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತ್ವರಿತ ವಿಚ್ಛೇದನದ ಒಂದು ರೂಪ) ದಂತಹ ಪದ್ಧತಿಗಳ ನಿರ್ಮೂಲನೆ ಮುಂತಾದ ವಿಷಯಗಳಲ್ಲಿ ಎಲ್ಲಾ ನಾಗರಿಕರಿಗೆ ಏಕರೂಪವಾಗಿ ಅನ್ವಯಿಸುವ ಕಾನೂನುಗಳನ್ನು ಜಾರಿಗೊಳಿಸಿದೆ. ಈ ಕ್ರಮಗಳು ಲಿಂಗ ಸಮಾನತೆಯನ್ನು ಉತ್ತೇಜಿಸುವ ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿವೆ.

ಯುನಿವರ್ಸಲ್ ಸಿವಿಲ್ ಕೋಡ್” (UCC) ಸಮಾನ ನಾಗರಿಕ ಸಂಹಿತೆ ಸಮಿತಿಯಿಂದ ಅಂತಿಮ ಕರಡು ವರದಿ ಸಲ್ಲಿಕೆಯಾದ ಕೂಡಲೇ ಪ್ರಥಮವಾಗಿ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಧಮಿಯವರು ಹೇಳಿದ್ದಾರೆ.

Uniform Civil Code(UCC)-ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದರೆ ಏನೆಲ್ಲ ಪ್ರಯೋಜನಗಳಿವೆ.

ಸಮಾನತೆ ಮತ್ತು ತಾರತಮ್ಯವಿಲ್ಲದಿರುವುದು:

ಯುಸಿಸಿಯು(UCC) ಎಲ್ಲಾ ನಾಗರಿಕರನ್ನು ಅವರ ಧಾರ್ಮಿಕ ಹಿನ್ನೆಲೆಯನ್ನು ಲೆಕ್ಕಿಸದೆ ಎಲ್ಲರನ್ನು ಸಮಾನವಾಗಿ ಪರಿಗಣಿಸುವುದನ್ನು ಖಚಿತಪಡಿಸುತ್ತದೆ. ಇದು ಪ್ರಜಾಪ್ರಭುತ್ವದಲ್ಲಿನ ಮೂಲಭೂತವಾದ ಸಮಾನತೆ ಮತ್ತು ತಾರತಮ್ಯವನ್ನು ತೊಡೆದು ಹಾಕಲು ಉತ್ತೇಜಿಸುತ್ತದೆ. ವೈಯಕ್ತಿಕ ಕಾನೂನುಗಳಲ್ಲಿ ಅಂತರ್ಗತವಾಗಿರುವ ತಾರತಮ್ಯದ ನಡುವಳಿಕೆಗಳನ್ನು ತೆಗೆದುಹಾಕುವ ಮೂಲಕ, ಹೆಚ್ಚು ನ್ಯಾಯಯುತ ಮತ್ತು ಸಮಾನವಾದ ಕಾನೂನು ಚೌಕಟ್ಟನ್ನು ರಚಿಸಲು UCC ಕೊಡುಗೆ ನೀಡುತ್ತದೆ.

ಲಿಂಗ ಸಮಾನತೆ:

ಭಾರತದಲ್ಲಿನ ಅನೇಕ ವೈಯಕ್ತಿಕ ಕಾನೂನುಗಳು, ವಿಶೇಷವಾಗಿ ಮದುವೆ, ವಿಚ್ಛೇದನ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದವು, ಮಹಿಳೆಯರ ಕಡೆಗೆ ತಾರತಮ್ಯವೆಂದು ಗ್ರಹಿಸುವ ನಿಬಂಧನೆಗಳನ್ನು ಒಳಗೊಂಡಿವೆ. ಎಲ್ಲಾ ಧಾರ್ಮಿಕ ಸಮುದಾಯಗಳಾದ್ಯಂತ ಮಹಿಳೆಯರಿಗೆ ಏಕರೂಪದ ಹಕ್ಕುಗಳು ಮತ್ತು ರಕ್ಷಣೆಗಳನ್ನು ಒದಗಿಸುವ ಮೂಲಕ ಲಿಂಗ ಸಮಾನತೆಯನ್ನು ಉತ್ತೇಜಿಸುವಲ್ಲಿ UCC ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ಬಹುಪತ್ನಿತ್ವ, ಏಕಪಕ್ಷೀಯ ವಿಚ್ಛೇದನ, ಮತ್ತು ಮಹಿಳೆಯರ  ಸ್ವಾತಂತ್ರ್ಯ ಹಾಗೂ ಸ್ವಾಭಿಮನಕ್ಕೆ ದಕ್ಕೆ ತರುವಂತ ಸಂಪ್ರದಾಯಗಳ ಮಟ್ಟಹಾಕಲು ಇದು ಸಹಾಯ ಮಾಡುತ್ತದೆ.

ಸೆಕ್ಯುಲರಿಸಂ:

ಭಾರತವು ಜಾತ್ಯತೀತ ರಾಷ್ಟ್ರವಾಗಿದೆ ಮತ್ತು ಯುಸಿಸಿಯು ವೈಯಕ್ತಿಕ ಕಾನೂನಿನಿಂದ ಪ್ರತ್ಯೇಕಿಸಲ್ಪಡುತ್ತಿರುವ ಜನರನ್ನು ಬೆಸೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾಗರಿಕ ವಿಷಯಗಳಲ್ಲಿ ಧರ್ಮ-ಆಧಾರಿತ ವ್ಯತ್ಯಾಸಗಳನ್ನು ತೆಗೆದುಹಾಕುವ ಮೂಲಕ ಸಮಾಜದ ಪ್ರತಿಯೊಬ್ಬ ನಾಗರಿಕನಿಗು ಕಾನೂನು, ನ್ಯಾಯ, ಸಮಾನತೆ ವೈಯಕ್ತಿಕ ಹಕ್ಕುಗಳ ರಕ್ಷಣೆ ಮಾಡುವದರ ಜೊತೆಗೆ ನಿಜವಾದ ಜಾತ್ಯತೀತ ಕಾನೂನು ವ್ಯವಸ್ಥೆಯನ್ನು ಪೋಷಿಸುತ್ತದೆ.

ರಾಷ್ಟ್ರೀಯ ಏಕೀಕರಣ:

ಭಾರತವು ಬಹು ಧರ್ಮಗಳು ಮತ್ತು ಸಂಸ್ಕೃತಿಗಳನ್ನು ಹೊಂದಿರುವ ವೈವಿಧ್ಯಮಯ ರಾಷ್ಟ್ರವಾಗಿದೆ. ಸಾಮಾನ್ಯ ನಾಗರಿಕ ಸಂಹಿತೆಯನ್ನು ಎಲ್ಲಾ ನಾಗರಿಕರಿಗೆ ಏಕೀಕೃತ ಕಾನೂನು ಚೌಕಟ್ಟನ್ನು ಒದಗಿಸುವ ಮೂಲಕ ರಾಷ್ಟ್ರೀಯ ಏಕೀಕರಣಕ್ಕೆ ಪ್ರಮುಖ ಕೊಡುಗೆ ನೀಡುತ್ತದೆ. ಇದು ಧಾರ್ಮಿಕ ಅಡೆತಡೆಗಳನ್ನು ಮೀರಲು ಮತ್ತು ವೈವಿಧ್ಯಮಯ ಸಮುದಾಯಗಳ ನಡುವೆ ಏಕತೆ ಮತ್ತು ಬಾಂಧವ್ಯಗಳ ಬಲಪಡಿಸಲು ಸಹಾಯ ಮಾಡುತ್ತದೆ.

ಕಾನೂನು ಸರಳತೆ ಮತ್ತು ನಿಶ್ಚಿತತೆ:

ಪ್ರಸ್ತುತ, ಬಹು ವೈಯಕ್ತಿಕ ಕಾನೂನುಗಳ ಅಸ್ತಿತ್ವವು ಕಾನೂನು ವ್ಯವಸ್ಥೆಗೆ ಸಂಕೀರ್ಣತೆಗೆ ಕಾರಣವಾಗಿದ್ದು ಅನೇಕ ಗೊಂದಲವನ್ನು ಉಂಟುಮಾಡುತ್ತಿದ್ದು ಯುಸಿಸಿಯು ಎಲ್ಲಾ ನಾಗರಿಕರಿಗೆ ಅನ್ವಯವಾಗುವ ಒಂದೇ ಕಾನೂನಿನ ಸೂತ್ರಗಳನ್ನು ಒದಗಿಸುವ ಮೂಲಕ ಕಾನೂನುಗಳನ್ನು ಸಹ ಸರಳಗೊಳಿಸಿ ಕಾನೂನು ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.

ಆಧುನೀಕರಣ ಮತ್ತು ಪ್ರಗತಿ:

ಭಾರತದಲ್ಲಿನ ಅನೇಕ ವೈಯಕ್ತಿಕ ಕಾನೂನುಗಳು ಧಾರ್ಮಿಕ ಪಠ್ಯಗಳು ಮತ್ತು ಸಂಪ್ರದಾಯಗಳಿದ್ದು, ಅದು ಸಮಕಾಲೀನ ಸಾಮಾಜಿಕ ಮೌಲ್ಯಗಳು ಮತ್ತು ವಿಕಸನಗೊಳ್ಳುತ್ತಿರುವ ಸಾಮಾಜಿಕ ರೂಢಿಗಳಿಗೆ ಅನುಗುಣವಾಗಿರುವುದಿಲ್ಲ.

ಪ್ರಸ್ತುತ-ಯುಗಕ್ಕೆ ಸಂಬಂಧಿಸಿದ ನ್ಯಾಯ, ಸಮಾನತೆ ಮತ್ತು ವೈಯಕ್ತಿಕ ಹಕ್ಕುಗಳ ತತ್ವಗಳನ್ನು ಸಂಯೋಜಿಸುವ ಮೂಲಕ ವೈಯಕ್ತಿಕ ಕಾನೂನುಗಳ ಆಧುನೀಕರಣವನ್ನು UCC ಸುಗಮಗೊಳಿಸುತ್ತದೆ.

ಏಕರೂಪ ನಾಗರಿಕ ಸಂಹಿತೆಯ ಅನುಷ್ಟಾನಕ್ಕೆ ಇರುವ ಸವಾಲುಗಳೇನು.

ಏಕರೂಪ ನಾಗರಿಕ ಸಂಹಿತೆಯ ವಿರೋಧಿಗಳು ಧಾರ್ಮಿಕ ಸಮುದಾಯಗಳ ಸ್ವಾಯತ್ತತೆ ಮತ್ತು ಅವರ ನಂಬಿಕೆಗಳ ವೈಯಕ್ತಿಕ ವಿಷಯಗಳನ್ನು ಪಾಲನೆ ಮಾಡುವ ಹಕ್ಕನ್ನು ದುರ್ಬಲಗೊಳಿಸಬಹುದು ಎಂದು ಕೆಲವು ಧಾರ್ಮಿಕ ಮುಖಂಡರು ವಾದಿಸುತ್ತಾರೆ. ವೈಯಕ್ತಿಕ ಕಾನೂನುಗಳು ಧಾರ್ಮಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಮತ್ತು ಅದನ್ನು ರಕ್ಷಿಸಬೇಕು ಎನ್ನುವುದು ಅವರು ವಾದ.

ಹೆಚ್ಚುವರಿಯಾಗಿ, ಏಕರೂಪ ನಾಗರಿಕ ಸಂಹಿತೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವಾಗ ಭಾರತದ ವಿಶಾಲತೆ ಮತ್ತು ಜನಸಂಖ್ಯೆಯ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಸಮುದಾಯಗಳಿಗೆ ಸ್ವೀಕಾರಾರ್ಹವಾದ ಏಕೀಕೃತ ಕಾನೂನುಗಳನ್ನು ರೂಪಿಸಿ ಅನುಷ್ಠಾನಗೊಳಿಸ ಬೇಕಾಗಿರುವದರಿಂದ ವ್ಯಾಪಕವಾದ ಸಮಾಲೋಚನೆಗಳ ಅಗತ್ಯವಿರುತ್ತದೆ.

ಭಾರತವು ಧಾರ್ಮಿಕ ಸ್ವಾತಂತ್ರ್ಯಗಳು ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗೌರವಿಸುವ ದೇಶವಾಗಿದ್ದು ಸಮುದಾಯಗಳ ಕಾಳಜಿ ಮತ್ತು ಆಕಾಂಕ್ಷೆಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನವನ್ನು ಮಾಡಬೇಕು.

2 thoughts on “Uniform Civil Code(UCC)-ಏಕರೂಪ ನಾಗರಿಕ ಸಂಹಿತೆಯೆಂದರೇನು, ಪ್ರಯೋಜನೆಗಳೇನು ಭಾರತದ ಪ್ರತಿಯೊಬ್ಬ ನಾಗರಿಕನು ತಿಳಿದಿರಲೇ ಬೇಕಾದ ಮಾಹಿತಿ”

  1. ಎಲ್ಲರಿಗೂ ಒಂದೇ ಕಾನೂನು. ಎಲ್ಲರು ಒಂದೇ ನಾವು ನಮ್ಮ ದೇಶದ…. We proud my india… 💐💐

    Reply

Leave a Comment