ಫೆಡ್ಎಕ್ಸ್, ಬ್ಲೂ ಡಾರ್ಟ್ ಮತ್ತು ಇತರ ಕೊರಿಯರ್ ಕಂಪನಿಗಳ ಹೆಸರಿನಲ್ಲಿ ಇತ್ತೀಚಿನ “ವಂಚನೆ” ನಡೆಯುತ್ತಿದೆ ಎಂದು ಜಿರೋದಾ (Zerodha) ಮುಖ್ಯಸ್ತ ನಿತಿನ್ ಕಾಮತ್ ಅವರು ಎಚ್ಚರಿಸಿದ್ದಾರೆ.
ಶುಕ್ರವಾರದಂದು ರಿಟೇಲ್ ಬ್ರೋಕರೇಜ್ ಸಂಸ್ಥೆಯ (Zerodha) ಮುಖ್ಯಸ್ತ ನಿತಿನ್ ಕಾಮತ್ , FedEx, ಬ್ಲೂ ಡಾರ್ಟ್, ಮತ್ತು ಇತರ ಕೊರಿಯರ್ ಕಂಪನಿಗಳ ಹೆಸರಿನಲ್ಲಿ ಇತ್ತೀಚಿಗೆ “ವಂಚನೆ” ಮಾಡಲಾಗುತ್ತಿದೆ ಎಂದು ಎಚ್ಚರಿಸಿದ್ದಾರೆ. 43ರ ಹರೆಯದ ಉದ್ಯಮಿ, ವಂಚಕರು ಈಗ ಸಿಬಿಐ ಮತ್ತು ಕ್ರೈಂ ಬ್ರಾಂಚ್‌ನ ಅಧಿಕಾರಿಗಳು ತಾವು ಅಂತ ಹೇಳ್ಕೊಂಡು ಪೊನ್ ಕರೆ ಮಾಡಿ ಜನರನ್ನು ನಕಲಿ ಪ್ರಕರಣಗಳಲ್ಲಿ ಸಿಕ್ಕಿಸಿ ಜನರನ್ನು ಹೇಗೆ ಬಲಿಪಶುಗಳನ್ನಾಗಿ ಮಾಡಲಾಗುತ್ತದೆ ಎಂದು ವಿವರಿದ್ದಾರೆ
FedEx, ಬ್ಲೂ ಡಾರ್ಟ್ ಹೆಸರು ಬಳಸಿಕೊಂಡು ನಡಿತಾ ಇರೋ ಮೋಸವೇನು.?
ಕಾಮತ್ ಅವರ ಸಹೋದ್ಯೋಗಿಯೊಬ್ಬರು ಫೆಡ್‌ಎಕ್ಸ್‌ನಿಂದ ನಾವು ಎಂದು ಹೇಳಿಕೊಳ್ಳುವ ವ್ಯಕ್ತಿ ಕರೆ ಮಾಡಿದ್ದು, ಅದರಲ್ಲಿ ಡ್ರಗ್ಸ್ ಪತ್ತೆಯಾದ ಕಾರಣ ಪಾರ್ಸೆಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾನೆ. ಅದಲ್ಲದೆ ಅದೇ ಜಾಲದ ಇನ್ನೊಬ್ಬ ಪೋಲಿಸ್ ಯುನಿಪಾರ್ಮ್ ಧರಿಸಿ ಅವರಿಗೆ ವಿಡಿಯೋ ಕಾಲ್ ಸಹ ಮಾಡಿದ್ದಾನೆ . ಹಾಗೆಯೆ ಪ್ಯಾಕೇಜ್ ಬಿಡುಗಡೆ ಮಾಡಲು ಹಣದ ಬೇಡಿಕೆ ಇಟ್ಟು, ಹಣವನ್ನು ವರ್ಗಾಯಿಸಲು ವಂಚಕರು ಬ್ಯಾಂಕ್ ಖಾತೆ ವಿವರಗಳನ್ನು ಸಹ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ವಂಚಕ ಪೋಲಿಸ್ ಪಾತ್ರದಾರಿ ತನ್ನ ನಕಲಿ ಅಧಾರ ಕಾರ್ಡ ಅನ್ನು ಸಹ ತೋರಿಸಿ ನಂಬಿಕೆ ಹುಟ್ಟುವಂತೆ ಮಾಡಿ ಅವರನ್ನು ಇನ್ನೂ ಗಾಬರಿಗೆ ಬೀಳಿಸಿದ್ದಾನೆ. ಈ ಪಾಪದ ವ್ಯಕ್ತಿಯು ಗಾಬರಿಗೊಂಡು ತಕ್ಷಣವೇ ಹಣವನ್ನು ಸಹ ವರ್ಗಾಯಿಸಿದ್ದಾರೆ ಎಂದು ನಿತಿನ್ ಕಾಮತ್ ಸರಣಿ ಟ್ವೀಟ್ ಮಾಡಿದ್ದಾರೆ.
ವಂಚಕರ ಕರೆಯಿಂದ ಭಯಗೊಂಡ ಸಂದರ್ಭಗಳಲ್ಲಿ ಏನು ಮಾಡುವುದು ಉತ್ತಮ?
ಕಾಮತ್ ಹೇಳುವಂತೆ “ನನ್ನ ವಕೀಲರನ್ನು ನಿಮ್ಮೊಂದಿಗೆ ಮಾತನಾಡಲು ಹೇಳುತ್ತೇನೆ ಎಂದು ಪೋನ್ ಕಟ್ ಮಾಡಬೇಕು. ಹೆಚ್ಚಿನ ವಂಚಕರು ಜನರನ್ನು ಭಯಬೀತಗೊಳಿಸಿ ಯೋಚನೆ ಮಾಡಲು ಸಹ ಸಮಯ ಸಿಗದಂತೆ ಮಾಡಿ ಸಹಜವಾಗಿ ಪ್ರತಿಕ್ರಿಯಿಸುವ ಜನರನ್ನು ತಮ್ಮ ಜಾಲದಲ್ಲಿ ಕೆಡವುತ್ತಾರೆ. ಇದಕ್ಕೆ ಪರಿಣಾಮಕಾರಿ ಉಪಾಯವೆಂದರೆ ದೃತಿಗೆಡದೆ ನಿಧಾನವಾಗಿ ಯೋಚಿಸಿ ಪ್ರತಿಕ್ರೀಯಿಸುವುದು.
ಕಾಮತ್ ಅವರ ಈ ಅನುಭವ Twitter ನಲ್ಲಿ ಹರಿದಾಡುತ್ತಿದ್ದಂತೆ ಅನೇಕ ಟ್ವಿಟ್ಟರ್ ಬಳಕೆದಾರರು ಇದೇ ರೀತಿಯ ಮೋಸ ಹೋದ ತಮ್ಮ ಅನುಭವಗಳನ್ನು ಹಂಚಿಕೊಂಡರು ಮತ್ತು ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಫ್ಲ್ಯಾಗ್ ಮಾಡಿದ್ದಕ್ಕಾಗಿ ಕಾಮತ್ ಅವರಿಗೆ ಧನ್ಯವಾದ ಅರ್ಪಿಸಿದರು.
There's a new scam in the name of FedEx, Blue Dart, and other courier companies that you need to be aware of 👇
— Nithin Kamath (@Nithin0dha) June 23, 2023
A colleague got a call from a person claiming to be from FedEx saying that a parcel had been confiscated by the police because drugs were found in it. 1/4
ವಂಚಕರು ಯಾವ ಯಾವ ರೀತಿ ಅಮಾಯಕರನ್ನು ದೋಚುತ್ತಾರೆ..
ಅನೇಕರು ಹೇಳುವಂತೆ, “ಈ ರೀತಿಯ ಮೋಸವು ಹಲವು ತಿಂಗಳುಗಳಿಂದ ನಡೆಯುತ್ತಿದೆ. ತನ್ನ ಸ್ನೇಹಿತರೊಬ್ಬರಿಗೆ ಸುಮಾರು ನಾಲ್ಕು ತಿಂಗಳ ಹಿಂದೆ ಅಂತಹ ಕರೆ ಬಂದಿತ್ತು ಮತ್ತು ಇನ್ನೊಬ್ಬ ಸ್ನೇಹಿತನಿಗೆ ಎರಡು ತಿಂಗಳ ಹಿಂದೆ ಅದೇ ರೀತಿಯ ಕರೆ ಬಂದಿತ್ತು. ಪ್ರತಿಯೊಬ್ಬರೂ ಬಹಳ ಜಾಗರೂಕರಾಗಿರಬೇಕು ಏಕೆಂದರೆ ವಂಚಕರು ಪ್ರತಿ ಬಾರಿ ಹೊಸ ಕಥೆಗಳನ್ನು ನಿರ್ಮಿಸಿ ಮೋಸ ಜಾಲಕ್ಕೆ ಕೆಡವಿ ಹಣ ದೋಚುತ್ತಾರೆ.
“8 ತಿಂಗಳ ಹಿಂದೆ ಫೆಡೆಕ್ಸ್ ಪಾರ್ಸೆಲ್ ಅನ್ನು ಉಲ್ಲೇಖಿಸಿ ನನಗೆ ಅಂತಹ ಕರೆ ಬಂದಿತ್ತು. ಅವರು ಪೊಲೀಸ್ ಫೋಟೋ ಐಡಿ ಹಂಚಿಕೊಂಡಿದ್ದಾರೆ. ನಾನು ಗಾಬರಿಗೊಂಡೆ, ಆದರೆ ಅಂತಿಮವಾಗಿ ನಾನು ಕಾನೂನು ಸಲಹೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ ನಂತರ ಕರೆ ಮಾಡಿದವರು ಥಟ್ಟನೆ ಕಡಿತಗೊಳಿಸಿದರು, ”ಎಂದು ಮತ್ತೊಬ್ಬರು ಹೇಳಿದರು.
ಇನ್ನೊಬ್ಬರು ಉತ್ತರಿಸಿದಾಗ, “ನಾನು ಕಾನೂನುಬಾಹಿರ ವಸ್ತುಗಳನ್ನು ಹೊಂದಿರುವ ಪ್ಯಾಕೆಟ್ ಅನ್ನು ಆರ್ಡರ ಮಾಡಿದ್ದೀರಿ ಹೇಳಿಕೊಂಡು ಪೆಡೆಕ್ಸ ಕೊರಿಯರ್ (Fedex Courier) ಹೆಸರಿನಲ್ಲಿ ಕನಿಷ್ಠ 4 ಬಾರಿ ಅಂತಹ ಕರೆಗಳನ್ನು ಸ್ವೀಕರಿಸಿದ್ದೇನೆ, ಆ ನಂತರ ಕರೆ ಮಾಡಿದವರು ಮುಂಬೈ ಅಪರಾಧ ವಿಭಾಗಕ್ಕೆ ದೂರು ನೀಡುವಂತೆ ಕೇಳಿದರು. ಆದರೆ ಕೊನೆಯದಾಗಿ, ನಾನು ಸ್ಥಳೀಯ ಪಿಎಸ್‌ನಲ್ಲಿ ಫೈಲ್ ಮಾಡುತ್ತಿದ್ದೇನೆ ಎಂದು ಹೇಳಿದಾಗ, ವಂಚಕ ಕಾಲ್ ಕಟ್ ಮಾಡಿದ್ದಾನೆ.